ನಾಳೆ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಮಠದ ಶ್ರೀ ವಿಧ್ಯಾಧಿರಾಜ ಸ್ವಾಮೀಜಿಯವರ ದ್ವಿತಿಯ ಪುಣ್ಯತಿಥಿ
ಬ್ರಹ್ಮಾವರ: ಜೂ.28 ರಂದು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಮಠದ ಶ್ರೀ ವಿಧ್ಯಾಧಿರಾಜ ಸ್ವಾಮೀಜಿಯವರ ದ್ವಿತಿಯ ಪುಣ್ಯತಿಥಿಯು ಶಿರಿಯಾರ ಕಲ್ಮರ್ಗಿ ಶ್ರೀ ರಾಮ ಮಂದಿರದಲ್ಲಿ ಜರುಗಲಿರುವುದು. ಸಂಜೆ 6.30 ಕ್ಕೇ ಪ್ರಾರ್ಥನೆ ನಂತರ ಭಜನೆ, 8.00 ಗಂಟೆಗೆ ಗುರುವರ್ಯರ ಗುಣಗಾನ, 8.30 ಗಂಟೆಗೆ ಮಂಗಳಾರತಿ, ಅನಂತರ ಭೋಜನ ಪ್ರಸಾದ ನಡೆಯಲಿದೆ. ಸಮಾಜ ಬಾಂಧವರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಪ್ರಕಟಣೆ ತಿಳಿಸಿದೆ.