ಕಂಗಾಲಾದ ಗ್ರಾ​ಹಕರಿಗೆ ಗುಡ್​ ನ್ಯೂಸ್, ಶೀಘ್ರದಲ್ಲೇ ಟೊಮೆಟೊ ಬೆಲೆ ಇಳಿಕೆ

ಚೆನ್ನೈ: ಕಳೆದ ಮೇ ತಿಂಗಳಲ್ಲಿ ಕೆ.ಜಿ ಗೆ 20 ರೂ.ಗೆ ದೊರೆಯುತ್ತಿದ್ದ ತರಕಾರಿ ಇದೀಗ 100 ರೂ.ಗೆ ಜಿಗಿದಿದೆ. ಪರಿಣಾಮ, ಗ್ರಾಹಕರು ಕಂಗಾಲಾಗಿದ್ದಾರೆ. ಇದರ ನಡುವೆ ಜನಸಾಮನ್ಯರಿಗೆ ಶುಭ ಸುದ್ದಿ ಬಂದಿದ್ದು, ಜುಲೈ-ನವೆಂಬರ್ ವೇಳೆಗೆ ಬೆಲೆ ಕಡಿಮೆಯಾಗಬಹುದು ಎಂದು ಬ್ಯಾಂಕ್ ಆಫ್ ಬರೋಡಾ ವರದಿ ಹೇಳಿದೆ. ಕಡಿಮೆ ಇಳುವರಿ ಹಾಗು ಮಳೆಯಿಂದಾಗಿ ಮಾರುಕಟ್ಟೆಗೆ ಕಡಿಮೆ ಆವಕವಾದ ಕಾರಣಕ್ಕೆ ಈ ಬಾರಿ ಟೊಮೆಟೊ ಬೆಲೆ ಮುಗಿಲು ಮುಟ್ಟಿದೆ.ದೇಶಾದ್ಯಂತ ಟೊಮೆಟೊ ಸೇರಿದಂತೆ ಕೆಲವು ತರಕಾರಿಗಳ ಬೆಲೆ ಗಗನಕ್ಕೇರಿದೆ. ಹೀಗಾಗಿ, ಗ್ರಾಹಕರು […]