ಚಿಣ್ಣರ ಮೊಗದಲ್ಲಿ ನಗು ಉಕ್ಕಿಸಿದ “ಟಾಮ್ ಅಂಡ್ ಜೆರ್ರಿ” ನಿರ್ದೇಶಕ ಜೆನಿ ಡಿಚ್ ಇನ್ನಿಲ್ಲ
ಚಿಣ್ಣರ ಮೊಗದಲ್ಲಿ ನಗು ಉಕ್ಕಿಸಿದ “ಟಾಮ್ ಅಂಡ್ ಜೆರ್ರಿ” ನಿರ್ದೇಶಕ ಜೆನಿ ಡಿಚ್ ಅಮೇರಿಕಾದಲ್ಲಿ ನಿಧನರಾಗಿದ್ದಾರೆ. ಇವರು 1962 ರಿಂದ ನಿರ್ಮಿಸಿದ್ದ ಕಾಮಿಕ್ಸ್ ಮಕ್ಕಳ ಧಾರವಾಹಿಯನ್ನು ಮಕ್ಕಳು ಸೇರಿದಂತೆ ಎಲ್ಲಾ ವಯೋಮಾನದ ಮಂದಿ ಮುಗಿಬಿದ್ದು ನೋಡುತ್ತಿದ್ದರು. ಈಗಲೂ ಟಾಮ್ ಅಂಡ್ ಜೆರ್ರಿ ನೋಡುವವರಿಗೂ ಏನೂ ಕಮ್ಮಿ ಇಲ್ಲ. ಈ ಧಾರಾವಾಹಿ ಜೆನಿ ಡಿಚ್ ಅವರ ಕನಸಿನ ಕೂಸಾಗಿತ್ತು. ಜಗತ್ತಿನಲ್ಲೇ ಈ ಧಾರಾವಾಹಿ ಮೆಚ್ಚುಗೆ ಗಳಿಸಿತ್ತು. ಇದೀಗ ಆ ಕನಸು ಹುಟ್ಟಿಸಿದ್ದ ಡಿಚ್ ಅವರು ನಿಧನರಾಗಿದ್ದಾರೆ.