ಹಿರ್ಗಾನ ಕುಂದೇಶ್ವರ ಕ್ಷೇತ್ರದ ವರ್ಷಾವಧಿ ಉತ್ಸವ ಇಂದು

udupixpress

ಕಾರ್ಕಳ: ಕಾರ್ಕಳ ಹಿರ್ಗಾನದ ಶ್ರೀ ಕುಂದೇಶ್ವರ ಕ್ಷೇತ್ರದ ವರ್ಷಾವಧಿ ಮಹೋತ್ಸವ ಶುಕ್ರವಾರ ನಡೆಯಲಿದೆ. ಜ. 23ರಂದು ರಾತ್ರಿ 9 ಗಂಟೆಗೆ ಶ್ರೀಕುಂದೇಶ್ವರ ಸಮ್ಮಾನ್ ಪ್ರಶಸ್ತಿಯನ್ನು ಈ ಬಾರಿ ಸೌಕೂರು ಮೇಳದ ಭಾಗವತ ಡಾ. ರವಿಕುಮಾರ್ ಸೂರಾಲು ಅವರಿಗೆ ನೀಡಲಾಗುವುದು. ಸೌಕೂರು ಮೇಳದವರಿಂದ ರಾತ್ರಿ 8 ಗಂಟೆಯಿಂದ ಪುಷ್ಪ ಚಂದನ ಯಕ್ಷಗಾನ ಪ್ರದರ್ಶನ ಗೊಳ್ಳಲಿದೆ. ಶ್ರೀಕ್ಷೇತ್ರದಲ್ಲಿ ಇಂದು ಮಹೋತ್ಸವ, ಅನ್ನಸಂತರ್ಪಣೆ, ರಂಗಪೂಜೆ, ಭೂತ ಬಲಿ, ಕಟ್ಟೆಪೂಜೆ, ನೇಮೋತ್ಸವ, ಜ.23ರಂದು ಸಂಪ್ರೋಕ್ಷಣೆ ನಡೆಯಲಿದೆ.