ಶ್ರೀಕ್ಷೇತ್ರ ಪೆರ್ಡೂರು: ಇಂದು ವೈಭವದ ಜಾತ್ರಾ ಮಹೋತ್ಸವ
ಪೆರ್ಡೂರು: ಶ್ರೀಕ್ಷೇತ್ರ ಪೆರ್ಡೂರು ಮಹತೋಭಾರ ಶ್ರೀ ಅನಂತಪದ್ಮನಾಭ ದೇವಸ್ಥಾನದ ಜಾತ್ರಾ ಮಹೋತ್ಸವವು ದೇವರ ಸನ್ನಿಧಿಯಲ್ಲಿ ಇಂದು ವೈಭವದಿಂದ ನಡೆಯಲಿದೆ. ಇಂದು ಬೆಳಿಗ್ಗೆ ಪ್ರಧಾನಹೋಮ, ಕಲಶಾಭಿಷೇಕ, ರಥಹೋಮ, ರಥಸಂಪ್ರೋಕ್ಷಣೆ, ಕೊಡಿಪೂಜೆ, ಮಹಾಪೂಜೆ, ಬೆಳಿಗ್ಗೆ 11.30ಕ್ಕೆ ರಥಾರೋಹಣ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಅಂದು ಸಂಜೆ 6ಗಂಟೆಗೆ ವೈಭವದ ಶ್ರೀಮನ್ಮಹಾರಥೋತ್ಸವ ಜರಗಲಿದೆ. ರಾತ್ರಿ ದೀವಟಿಗೆ ಸೇವೆ, ನರ್ತನ, ವಾದ್ಯ ಸೇವಾದಿಗಳು, ಹಚ್ಚಡ ಸೇವೆ, ರಥಾರೋಹಣ, ಪಲ್ಲಕ್ಕಿ ಉತ್ಸವ, ತೆಪ್ಪೋತ್ಸವ, ಓಲಗಮಂಟಪದಲ್ಲಿ ಪೂಜೆ, ಅಷ್ಟಾವಧಾನ ಸೇವೆಗಳು, ಮಹಾಪೂಜೆ, ಶ್ರೀಭೂತಬಲಿ, ಕವಾಟಬಂಧನ, ಶಯನೋಲಗ […]