ಹಿಂದಿನಿಂದ ಕಾರಿಗೆ ಡಿಕ್ಕಿ ಹೊಡೆದು ಹಾಗೆಯೇ ಎಳೆದೊಯ್ದ ಟಿಪ್ಪರ್

ಉಡುಪಿ: ಸ್ಯಾಂಟ್ರೋ ಕಾರನ್ನು ಕನ್ನಂಗಾರ್ ಬೈಪಾಸ್ ಬಳಿ ಟಿಪ್ಪರ್ ಹಿಂದಿನಿಂದ ಢಿಕ್ಕಿ ಹೊಡೆದು ಗಮನಿಸದೆ ಹೆಜಮಾಡಿಯ ಟೋಲ್ ಗೇಟ್ ವರೆಗೂ ಎಳೆದುಕೊಂಡು ಹೋಗಿರುವ ಪ್ರಸಂಗ ವರದಿಯಾಗಿದೆ. ಟಿಪ್ಪರ್ ಬೆಳ್ಮಣಿನಿಂದ ಬೈಕಂಪಾಡಿಗೆ ಸಾಗುತ್ತಿತ್ತು .ಕಾರು ಅಪಘಾತಕ್ಕೊಳಗಾದ ನಂತರ ಕಾರು ಸಿಲುಕಿಕೊಂಡದ್ದು ಗೊತ್ತಿಲ್ಲದ ಟಿಪ್ಪರ್ ಚಾಲಕ ಟಿಪ್ಪರನ್ನು ಚಲಾಯಿಸಿದ್ದಾನೆ. ಬೇರೊಂದು ಕಾರಿನವರು ಓವರ್ ಟೆಕ್ ಮಾಡಿ ನಿಲ್ಲಿಸಲು ಸೂಚಿಸಿದರೂ ಟಿಪ್ಪರನ್ನು ಚಲಾಯಿಸುತ್ತಲೇ ಇರುವ ದೃಶ್ಯ ವೈರಲ್ ಆಗಿದೆ. ಬೇರೆ ಕಾರಿನವರು ಹೇಳಿದ ಬಳಿಕ ಟಿಪ್ಪರ್ ಚಾಲಕ ಹೆಜಮಾಡಿಯಲ್ಲಿ ನಿಲ್ಲಿಸಿದ್ದಾನೆ. ಪಡುಬಿದ್ರಿ […]