ತನ್ನ ನಾಲ್ಕು ಮರಿಗಳ ಜೊತೆ ಸತ್ತ ಸಹೋದರಿಯ ಮೂರು ಮರಿಗಳನ್ನೂ ಸಾಕುತ್ತಿರುವ ಹುಲಿಯಮ್ಮ: ಕಾನನದಲ್ಲೊಂದು ಅಪರೂಪದ ಬಂಧನ!

ಸಾಮಾನ್ಯವಾಗಿ ಪ್ರಾಣಿಗಳು ಮನುಷ್ಯರಂತೆ ಕುಟುಂಬ ವ್ಯವಸ್ಥೆಯನ್ನು ಹೊಂದಿರುವುದಿಲ್ಲ. ಮನುಷ್ಯನಂತೆ ಪ್ರಾಣಿಗಳಿಗೆ ಸಂಸಾರದ ಬಂಧನವಿಲ್ಲ.  ಪ್ರಾಣಿ ಪ್ರಪಂಚದಲ್ಲಿ ಮಕ್ಕಳ ಲಾಲನೆ ಪಾಲನೆ ಎಲ್ಲವೂ ಹೆತ್ತಮ್ಮನದ್ದೇ ಆಗಿರುತ್ತದೆ. ಮರಿಯು ತನ್ನ ಕಾಲ ಮೇಲೆ ತಾನು ನಿಂತುಕೊಳ್ಳುವವರೆಗೂ ಅದರ ರಕ್ಷಣೆಯ ಜವಾಬ್ದಾರಿ ಹೊರುವ ತಾಯಿ, ಮರಿ ಸ್ವಾವಲಂಬಿ ಆದ ತಕ್ಷಣ ಅದನ್ನು ಅದರ ಪಾಡಿಗೆ ಬಿಟ್ಟು ಬಿಡುತ್ತದೆ. ಒಂದು ವೇಳೆ ತಾಯಿ ಸತ್ತು ಹೋಯಿತೆಂದರೆ ಆ ಮರಿಯ ಜವಾಬ್ದಾರಿ ಅದರದ್ದೇ ಆಗಿರುತ್ತದೆ. ಆದರೆ, ಕಾಡಿನಲ್ಲೊಂದು ಅಪರೂಪದ ಘಟನೆ ನಡೆದಿದೆ. ಇಲ್ಲಿ ತನ್ನ […]

ಕ್ಷಣ ಕ್ಷಣ ಬದಲಾಗುವ ಪ್ರಕೃತಿಯಿಂದ ಏನನ್ನೂ ನಿರೀಕ್ಷಿಸಬೇಡ….. ವೈಲ್ಡ್ ಲೈಫ್ ಛಾಯಾಗ್ರಾಹಕ ಕಂಡ ಕಾಡಿನ ರೋಚಕ ಕಥನ

ಹೊಸದೊಂದು ಕಥೆ ಬರೆಯುತಿರುವೆ ಮಾಡಿ ಹಳೆ ಪದಗಳ ರಿಪೇರಿ. ಎಂದಿನಂತೆ ದಿನ ಸಾಗುತ್ತಿತ್ತು. ಸಾಮಾನ್ಯ ದಿನವೆಂಬಂತೆ ನನ್ನ ದೈನಂದಿನ ಕೆಲಸದಲ್ಲಿ ತೊಡಗಿರುವಾಗ ನನ್ನ ಗುರುಗಳಾದ ಶ್ರೀಕಾಂತ್ ಸರ್ ನನಗೆ ಕರೆ ಮಾಡಿ “ಕಾಡಲ್ಲಿ ಹುಲಿಯ ತಾಜಾ ಹೆಜ್ಜೆ ಗುರುತು ಕಂಡಿದೆಯಂತೆ ಬಾ ಹೋಗೋಣ” ಅಂತ ಕರೆದರು. ನಾನು ಬಹಳ ಉತ್ಸಾಹದಿಂದ ಎಲ್ಲಾ ಕೆಲಸ ಅರ್ಧಕ್ಕೆ ನಿಲ್ಲಿಸಿ ಕ್ಯಾಮೆರಾ ಬ್ಯಾಗ್ ತೆಗೆದುಕೊಂಡು ಮಧ್ಯಾಹ್ನ ಸುಮಾರು 1.30ಕ್ಕೆ ಮನೆ ಬಿಟ್ಟು ಭಾರೀ ಹುಮ್ಮಸ್ಸಿನಲ್ಲಿ ಕಾಡಿನತ್ತ ಹೊರಟೆ. ಸರ್ ನ ಮನೆ […]