ಆ. 23: ಹುಲಿವೇಷದಾರಿ ಅಶೋಕ್ ರಾಜ್ ಬಳಗದಿಂದ ಹುಲಿವೇಷ ಸ್ಪರ್ಧೆ
ಉಡುಪಿ: ಉಡುಪಿಯ ಪ್ರಸಿದ್ದ ಜಾನಪದ ಹುಲಿವೇಷದಾರಿ ತಂಡ ಅಶೋಕ್‌ರಾಜ್ ಮತ್ತು ಬಳಗ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಆ. 23ರಂದು ಹುಲಿವೇಷ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಶನಿವಾರ ಬಳಗದ ಅಧ್ಯಕ್ಷ ಅಶೋಕ್‌ರಾಜ್ ಕಾಡಬೆಟ್ಟು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅಂದು ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಬ್ರಹ್ಮಗಿರಿ ಜಂಕ್ಷನ್‌ನಲ್ಲಿ ಹುಲಿವೇಷ ಸ್ಪರ್ಧೆ ನಡೆಯಲಿದೆ. ಒಟ್ಟು 15 ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ ಸಾವಿರಾರು ಮಂದಿಗೆ ಸ್ಪರ್ಧೆ ವೀಕ್ಷಣೆ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಬೃಹತ್ ಎಲ್‌ಇಡಿ […]