ಶ್ರೀಕೃಷ್ಣ ಜನ್ಮಾಷ್ಟಮಿ ಸಮಾರೋಪ ಸಮಾರಂಭ; ಸ್ಪರ್ಧಿಗಳಿಗೆ ಬಹುಮಾನ ವಿತರಣೆ

ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ ಅಷ್ಟದಿನೋತ್ಸವದ ಸಮಾರೋಪ ಸಮಾರಂಭವು ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ನಡೆಯಿತು. ಪರ್ಯಾಯ ಶ್ರೀ‌ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿ ಮಾತನಾಡಿ, ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿದ ಆಚಾರ್ಯ ಮಧ್ವರು ಮತ್ತು ಶ್ರೀವಾದಿರಾಜತೀರ್ಥರು ಹಾಕಿಕೊಟ್ಟ ಪರಂಪರೆಯನ್ನು ಮುಂದುವರೆಸಿಕೊಂಡು ದೇವರ ಪೂಜೆಯನ್ನು ವಿವಿಧ ಮುಖಗಳಲ್ಲಿ ಮಾಡುವುದಷ್ಟೇ ನಮ್ಮ ಕೆಲಸ. ಅದನ್ನೂ ಶ್ರೀಕೃಷ್ಣನೇ ಮಾಡಿಸುತ್ತಿದ್ದಾನೆ ಎಂದರು. ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು ಹಾಗೂ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ಬೆಂಗಳೂರಿನ ವಿದ್ವಾನ್ ಬ್ರಹ್ಮಣ್ಯ ಆಚಾರ್ಯ ‘ದಾಸರು ಕಂಡಂತೆ ಶ್ರೀಕೃಷ್ಣ’ಕುರಿತು […]

ಹುಲಿ ಕುಣಿತ ಸಂದರ್ಭದಲ್ಲಿ ವೇಷಧಾರಿಯ ಮೈಮೇಲೆ ಆವೇಶ!!

ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿಯಂದು ಹುಲಿವೇಷಧಾರಿಯೊಬ್ಬರ ಮೈಮೇಲೆ ಆವೇಶವಾಗಿದೆ. ಹುಲಿಕುಣಿತದ ಸಂದರ್ಭದಲ್ಲಿ ವೇದಿಕೆಯ ಕುಣಿಯುತ್ತಿದ್ದ ಹೊತ್ತಿನಲ್ಲೇ ಮೈಮೇಲೆ ಆವೇಶವಾಗಿರುವ ವಿಡೀಯೋ ವೈರಲ್ ಆಗಿದೆ. ಬುಧವಾರದಂದು ಕೊರಂಗ್ರಪಾಡಿಯ ಜೂನಿಯರ್ ಫ್ರೆಂಡ್ಸ್ ತಂಡದವರು ನಿಟ್ಟೂರಿನಲ್ಲಿ ವೇದಿಕೆಯ ಮೇಲೆ ಹುಲಿಕುಣಿತ ಪ್ರದರ್ಶಿಸುತ್ತಿದ್ದರು. ಈ ಸಮಯದಲ್ಲಿ ಅಖಿಲೇಶ್ ಎಂಬವರು ಮೈಮೇಲೆ ಆವೇಶಭರಿತರಾಗಿ ವೇದಿಕೆ ಮೇಲೆ ಹಾಕಿದ್ದ ಹಾಸುಗಂಬಳಿಯನ್ನು ಕಚ್ಚಿ ಎಳೆದಿದ್ದಾರೆ. ಆ ಕೂಡಲೇ ಎಚ್ಚೆತ್ತ ತಂಡದವರು ಅವರನ್ನು ಹತೋಟಿಗೆ ತರಲು ಯತ್ನಿಸಿದ್ದಾರೆ ಮತ್ತು ತಾಸೆ ನಿಲ್ಲಿಸಿ ಅವರಿಗೆ ಶೈತ್ಯೋಪಚಾರ ಮಾಡಿದ್ದಾರೆ. ಕಳೆದ 20 ವರ್ಷಗಳಿಂದ […]

ಗಣೇಶ ಹಬ್ಬದ ಪ್ರಯುಕ್ತ ಚಿಣ್ಣರ ಹುಲಿವೇಷ

ಕೊಡವೂರು: ಕೊಡವೂರು ದಿವ್ಯಾಂಗ ರಕ್ಷಣಾ ಸಮಿತಿಗೆ ಸಹಕಾರವಾಗಿ ಗಣೇಶ ಹಬ್ಬದ ಪ್ರಯುಕ್ತ ಚಿಣ್ಣರ ಹುಲಿವೇಷವನ್ನು ಆಗಸ್ಟ್ 31 ಗಣೇಶ ಹಬ್ಬದ ದಿನದಂದು ಆಯೋಜಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದ ದಿವ್ಯಾಂಗರ ರಕ್ಷಣೆಗೆ, ದುರ್ಬಲರಿಗೆ, ಕ್ಯಾನ್ಸರ್ ಪೀಡಿತರಿಗೆ, ಔಷಧೀಯ ವೆಚ್ಚಕ್ಕಾಗಿ ಕೊಡವೂರು ಮಕ್ಕಳ ಸಮಿತಿಯು ಹುಲಿ ವೇಷದ ಮೂಲಕ ನಿಮ್ಮ ಮುಂದೆ ಬರಲಿದ್ದಾರೆ. ನಿಮ್ಮ ಸಹಕಾರದ ನಿರೀಕ್ಷೆಯಲ್ಲಿ…. ಹರೀಶ್ ಕೊಪ್ಪಲ್ ತೋಟ, ಅಧ್ಯಕ್ಷರು ದಿವ್ಯಾಂಗ ರಕ್ಷಣಾ ಸಮಿತಿ ಹಾಗೂ ವಿಜಯ್ ಕೊಡವೂರು, ನಗರ ಸಭಾ ಸದಸ್ಯರು. ಗೂಗಲ್ ಪೇ 9743491112

ಪೀಸ್ ಫೌಂಡೇಶನ್ ಭಿನ್ನ ಸಾಮರ್ಥ್ಯದ ಸದಸ್ಯರಿಂದ ಹುಲಿ ವೇಷ ಪ್ರದರ್ಶನ

ಉಡುಪಿ: ಶ್ರೀಕೃಷ್ಣಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮಣಿಪಾಲದ ‘ಪೀಸ್ ಫೌಂಡೇಶನ್’ನ ವಿಕಲಚೇತನ ಸದಸ್ಯರು ಹುಲಿ ವೇಷ ತೊಟ್ಟು ಸಂಭ್ರಮಿಸಿದರು.

ಮಾಹೆ: ತುಳು ಸಂಸ್ಕೃತಿ ಆಚಾರ ವಿಚಾರದ ಬಗ್ಗೆ ಅರಿವು ನೀಡುವ ಆನ್ ಲೈನ್ ಕೋರ್ಸ್ ಆರಂಭ

ಮಣಿಪಾಲ: ಉನ್ನತ ಶಿಕ್ಷಣವು ಸ್ಥಳೀಯ ಮತ್ತು ಜಾಗತಿಕ ಸಂಸ್ಕೃತಿ ನಡುವೆ ಸಂಪರ್ಕ ಸ್ಥಾಪಿಸುವಲ್ಲಿ ಅದರ ಅರ್ಥವನ್ನು ಕಂಡುಕೊಳ್ಳುತ್ತದೆ. ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ಅದರ ಜಾಗತಿಕ ದೃಷ್ಟಿಕೋನದ ಜೊತೆಗೆ ಸಮುದಾಯದೊಂದಿಗೆ ಸತತವಾಗಿ ಕೆಲಸ ಮಾಡುತ್ತಿದೆ. ತುಳುನಾಡಿನ ಸಂಸ್ಕೃತಿಯ ಆನ್‌ಲೈನ್ ಕೋರ್ಸ್ ಸ್ಥಳೀಯ ಮತ್ತು ಜಾಗತಿಕ ಸಂಸ್ಕೃತಿಗಳ ಛೇದಕದಲ್ಲಿ ಅಧ್ಯಯನ ಮತ್ತು ಸಂಶೋಧನೆಗೆ ಹೊಸ ಆಯಾಮವನ್ನು ನೀಡುವಂತಹ ಒಂದು ಪ್ರಯತ್ನವಾಗಿದೆ ಎಂದು ಬೆಂಗಳೂರಿನ ಮಣಿಪಾಲ್ ಶಿಕ್ಷಣ ಮತ್ತು ವೈದ್ಯಕೀಯ ಸಮೂಹ ಸಂಸ್ಥೆಯ ಅಧ್ಯಕ್ಷ ಮತ್ತು ಮಾಹೆಯ ಅಧ್ಯಕ್ಷ ಡಾ […]