ಸೈನಿಕರಿಗೆ ವರ್ಷದಲ್ಲಿ ಕನಿಷ್ಠ ನೂರು ದಿನ ರಜೆ ನೀಡಲು ಚಿಂತನೆ
ನವದೆಹಲಿ: ನಮ್ಮ ದೇಶದ ಸಿಎಪಿಎಫ್ ಯೋಧರು ತಮ್ಮ ಕುಟುಂಬದೊಂದಿಗೆ ಸಮಯ ಕಳೆಯಲು ಕನಿಷ್ಠ 100 ದಿನಗಳ ರಜೆ ನೀಡುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪ್ರಸ್ತಾವವು ಶೀಘ್ರದಲ್ಲಿ ಅನುಷ್ಠಾನಗೊಳ್ಳುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಸ್ತಾವದ ಸಮಗ್ರ ನೀತಿಯ ರೂಪುರೇಷೆಗಳನ್ನು ರೂಪಿಸಲಾಗಿದ್ದು, ಇದರ ಅನುಷ್ಠಾನಕ್ಕೆ ಇರುವ ಅಡ್ಡಿಗಳ ನಿವಾರಣೆಗೆ ಕೇಂದ್ರ ಗೃಹ ಸಚಿವಾಲಯವು ಹಲವು ಸಭೆಗಳನ್ನು ನಡೆಸಿದೆ. ಅತ್ಯಂತ ಸವಾಲೆನಿಸುವ ಪರಿಸರದ ವಾತಾವರಣ ಮತ್ತು ದೂರದ ಸ್ಥಳಗಳಲ್ಲಿ ಕ್ಲಿಷ್ಟಕರ ಕೆಲಸಗಳನ್ನು ನಿರ್ವಹಿಸುವ […]