ಮೂರನೇ ಸವಾರನೂ ವಿಮೆಗೆ ಅರ್ಹ: ಹೈಕೋರ್ಟ್
ಬೆಂಗಳೂರು: ದ್ವಿಚಕ್ರ ವಾಹನದ ವಿಮೆಗೆ ಸಂಬಂಧಿಸಿ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಬೈಕ್ ಅಪಘಾತ ಸಂದರ್ಭದಲ್ಲಿ ಮೂವರು ಸವಾರಿ ಮಾಡುತ್ತಿದ್ದರೆ, ಮೂರನೇ ಸವಾರನಿಗೂ ಪರಿಹಾರ ನೀಡಬೇಕು ಎಂದು ವಿಮಾ ಕಂಪನಿಗೆ ಹೈಕೋರ್ಟ್ ಆದೇಶಿಸಿದೆ. 2011ರಲ್ಲಿ ಕಲಬುರ್ಗಿಯಲ್ಲಿ ನಡೆದಿದ್ದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಈ ಆದೇಶ ನೀಡಿದೆ. ಈ ಪ್ರಕರಣದಲ್ಲಿ ಮೂರನೇ ಸವಾರರಿಗೂ ವಿಮೆ ನೀಡಬೇಕು ಎಂದು ಮೋಟಾರು ವಾಹನ ನ್ಯಾಯಮಂಡಳಿ 2012ರಲ್ಲಿ ನೀಡಿದ್ದ ಆದೇಶವನ್ನು ವಿಮಾ ಕಂಪನಿ ಪ್ರಶ್ನಿಸಿತ್ತು. ಮೂರನೇ ಸವಾರನ ಕುಟುಂಬಕ್ಕೆ ₹8.10 ಲಕ್ಷ ಪರಿಹಾರ […]