ನಟ ಸುಶಾಂತ್ ಸಾವಿನ ಬಗ್ಗೆ ಮಾಹಿತಿ ಇದೆ, ಭದ್ರತೆ ನೀಡಿದರೆ ತಿಳಿಸುತ್ತೇನೆಂದ ಮಧ್ಯಪ್ರದೇಶದ ಮಹಿಳೆ
ಇಂದೋರ್: ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿ ಇದೆ. ನನಗೆ ಸೂಕ್ತ ಭದ್ರತೆ ನೀಡಿದರೆ ಮಾಹಿತಿ ನೀಡುವುದಾಗಿ ಮಧ್ಯ ಪ್ರದೇಶದ ಮಹಿಳೆಯೊಬ್ಬರು ಹೇಳಿದ್ದಾರೆ. ಈ ಮಹಿಳೆ ಮುಂಬೈ ನಿವಾಸಿಯಾಗಿದ್ದು, ಪ್ರಸ್ತುತ ಇಂದೋರ್‌ನಲ್ಲಿ ತನ್ನ ಸಂಬಂಧಿಕರೊಂದಿಗೆ ವಾಸಿಸುತ್ತಿದ್ದಾರೆ. ಇತ್ತೀಚೆಗೆ ಮಹಿಳೆ ತಮ್ಮನ್ನು ಭೇಟಿ ಮಾಡಿದ್ದರು ಎಂದು ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ ಹರಿನಾರಾಯಣಾಚಾರಿ ಮಿಶ್ರಾ ಅವರು ಇಂದು ಸುದ್ದಿಗಾರರಿಗೆ ತಿಳಿಸಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ತನಗೆ ಬಹಳ ದಿನದಿಂದ ಗೊತ್ತು ಎಂದಿರುವ ಮಹಿಳೆ, ನಟನ […]