ಮಂದಾರ್ತಿ ಜಾತ್ರೆಗೆ ಬಂದಿದ್ದ ಇಬ್ಬರು ಮಹಿಳೆಯರು ನಾಪತ್ತೆ

ಬ್ರಹ್ಮಾವರ: ಇಲ್ಲಿನ ಹೆಗ್ಗುಂಜೆ ಗ್ರಾಮದ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ಜಾತ್ರೆಗೆಂದು ಬಂದಿದ್ದ ಇಬ್ಬರು ಮಹಿಳೆಯರು ಕಾಣೆಯಾಗಿದ್ದು, ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜಾತ್ರೆಯಲ್ಲಿ ನಾಪತ್ತೆಯಾದವರನ್ನು ಪ್ರಸ್ತುತ ಬೆಳಗಾವಿಯ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದಲ್ಲಿ ನೆಲೆಸಿರುವ ಬ್ರಹ್ಮಾವರ ಬೈಕಾಡಿಯ ಮೂಲದ ಜ್ಯೋತಿ (30) ಹಾಗೂ ಹಿರೇಕೋಡಿ ಗ್ರಾಮದ ಪ್ರಿಯಾಂಕ (24) ಎಂದು ಗುರುತಿಸಲಾಗಿದೆ. ಜ್ಯೋತಿ ಅವರನ್ನು ಬೆಳಗಾವಿಯ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಿವಾಸಿ ಬಂಡು ಅಪ್ಪಾಸಾಬ ದಾನ ವಾಡೆ (30) […]