ಭೀಕರ ಅಪಘಾತ: ನವವಿವಾಹಿತೆ ಮೃತ್ಯು
ಪುತ್ತೂರು: ಬೆಂಗಳೂರಿನ ನೆಲಮಂಗಲ ರಸ್ತೆಯಲ್ಲಿ ಇಂದು ಕೋಳಿ ಸಾಗಾಟದ ಲಾರಿ ಹಾಗೂ ವ್ಯಾಗನರ್ ಕಾರು ನಡುವೆ ಭೀಕರ ಅಪಘಾತ ನಡೆದಿದ್ದು, ಚಿಕ್ಕಮುಡ್ನೂರು ಗ್ರಾಮದ ದಾರಂದಕುಕ್ಕು ನವವಿವಾಹಿತೆ ದಾರುಣವಾಗಿ ಮೃತಪಟ್ಟಿದ್ದಾರೆ. ಚಿಕ್ಕಮುಡ್ನೂರು ಗ್ರಾಮದ ದಾರಂದಕುಕ್ಕು ನಿವಾಸಿ ಗೋಪಿಕ್ ಎಂಬವರ ಪತ್ನಿ ಧನುಷಾ (23) ಎಂದು ಮೃತ ದುರ್ದೈವಿ. ಇವರು ಫೆ.21ರಂದು ಗುರುವಾಯನಕೆರೆ ಬಂಟರ ಭವನದಲ್ಲಿ ವಿವಾಹವಾಗಿದ್ದರು. ಇಂದು ನವದಂಪತಿ ತನ್ನ ದೊಡ್ಡಮ್ಮ ಹಾಗೂ ರೂಪಾ ವೇಣುಗೋಪಾಲ್ ಅವರೊಂದಿಗೆ ಎ.3ರಂದು ಸಂಬಂಧಿಕರ ಮನೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಮುಂಜಾನೆ […]