ಅತ್ತೂರು ವಾರ್ಷಿಕ ಮಹೋತ್ಸವದ ಹತ್ತನೇ ದಿನ: ಒಳಿತನ್ನು ಮಾಡಲು ಧರ್ಮ, ದೇಶ, ಜನಾಂಗಗಳ ಗಡಿ ಮೀರಿ ಸಾಗೋಣ: ಬಿಷಪ್ ಜೆರಾಲ್ಡ್ ಲೋಬೊ
ಅತ್ತೂರು: ನಾವು ಬಡವರಿಗೆ ಮಾಡಿದ ಒಳಿತಿನ ಪ್ರತಿಫಲವನ್ನು ದೇವರು ನಮಗೆ ನೂರ್ಮಡಿಯಾಗಿ ಹಿಂದಿರುಗಿಸುತ್ತಾರೆ. ನಮ್ಮ ಸಹೋದರ ಸಹೋದರಿಯರಿಗೆ ಒಳಿತನ್ನು ಮಾಡುವ ಯಾವುದೇ ಅವಕಾಶವನ್ನು ನಾವು ತಪ್ಪಿಸಿಕೊಳ್ಳಬಾರದು. ಈ ಲೋಕದ ಅಸಂಖ್ಯಾತ ಜನರು ನಮ್ಮ ಸಹಾಯಕ್ಕಾಗಿ ಎದುರು ನೋಡುತ್ತಿದ್ದಾರೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು. ಅತ್ತೂರಿನ ಸಂತ ಲಾರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವದಲ್ಲಿ ದಿನದ ಪ್ರಮುಖ ಪೂಜೆಯನ್ನು ನೆರವೇರಿಸಿ ಮಾತನಾಡಿದರು. ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಹತ್ತನೇ ದಿನವಾದ ಬುಧವಾರ ಭಕ್ತಾದಿಗಳ ಉಪಸ್ಥಿತಿಯಲ್ಲಿ ಬಲಿಪೂಜೆಗಳು […]