ಇನ್ಮುಂದೆ ವಾಟ್ಸ್ ಆ್ಯಪ್ ಮೂಲಕ ಸಿಲಿಂಡರ್ ಕಾಯ್ದಿರಿಸಲು ಅವಕಾಶ
ಬೆಂಗಳೂರು: ಇನ್ಮುಂದೆ ಗ್ರಾಹಕರು ವಾಟ್ಸ್ ಆ್ಯಪ್ ಮೂಲಕವೂ ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಕಾಯ್ದಿರಿಸಬಹುದಾಗಿದೆ. ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (ಬಿಪಿಸಿಎಲ್) ವಾಟ್ಸ್ ಆ್ಯಪ್ ಸಂದೇಶಗಳ ಮೂಲಕ ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್‌ಗಳ ಮರುಪೂರಣ ಹಾಗೂ ಕಾಯ್ದಿರಿಸಲು ಅವಕಾಶ ಮಾಡಿಕೊಟ್ಟಿದೆ. ‘ಹಲೋ’ ಸಂದೇಶವನ್ನು 1800224344 ಸಂಖ್ಯೆಗೆ ಕಳಿಸಿ, ಈ ಸೇವೆಯನ್ನು ಪಡೆಯಬಹುದು. ಹೆಚ್ಚುವರಿ ಸಿಲಿಂಡರ್, ಹೊಸ ಸಂಪರ್ಕ, ವಿಳಾಸ ಬದಲಾವಣೆ, ವಿತರಕರ ಕುರಿತ ಮಾಹಿತಿ ಮತ್ತು ಸಿಲಿಂಡರ್ ದರಗಳ ಮಾಹಿತಿಯನ್ನೂ ವಾಟ್ಸ್ ಆ್ಯಪ್ ಸಂದೇಶದ […]