ಸತ್ತಿದ್ದಾರೆ ಅಂದುಕೊಂಡ ವ್ಯಕ್ತಿ ತಿಥಿಯಂದು ಪ್ರತ್ಯಕ್ಷ: ತಿಥಿಯ ಸಿದ್ಧತೆಯಲ್ಲಿದ್ದ ಮನೆಯವರಿಗೆ ಶಾಕ್
ಬೆಳ್ತಂಗಡಿ: ಸತ್ತಿದ್ದಾರೆ ಅಂದುಕೊಂಡ ವ್ಯಕ್ತಿಯೊಬ್ಬರು ತಿಥಿಯ ದಿನದಂದು ಪ್ರತ್ಯಕ್ಷಗೊಂಡ ವಿಚಿತ್ರ ಘಟನೆಯೊಂದು ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ಶ್ರೀನಿವಾಸ್ ದೇವಾಡಿಗ (50 ) ತಿಂಗಳ ಹಿಂದೆ ನಾಪತ್ತೆಯಾಗಿದ್ದರು. ಮನೆಯವರು ಎಷ್ಟು ಹುಡುಕಾಟ ನಡೆಸಿದರೂ ಶ್ರೀನಿವಾಸ್ ದೇವಾಡಿಗ ಪತ್ತೆಯಾಗಿರಲಿಲ್ಲ. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಮನೆಯವರು ದೂರು ದಾಖಲಿಸಿದ್ದರು. ಫೆ. 6ರಂದು ಬೆಳ್ತಂಗಡಿಯ ಕಳಿಯ ಗ್ರಾಮದ ಗುಡ್ಡವೊಂದರಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಅಲ್ಲದೆ ಮೃತದೇಹವು ಸಂಪೂರ್ಣ ಕೊಳೆತ […]