ಉಡುಪಿಯಲ್ಲಿ ಶ್ರೀಲಂಕಾ ಪ್ರಜೆಯ ಅಂತ್ಯಸಂಸ್ಕಾರ: ಸಹಾಯಹಸ್ತ ಚಾಚಿ ಮಾನವೀಯತೆ ಮೆರೆದ ಸಾಮಾಜಿಕ ಕಾರ್ಯಕರ್ತರು

ಉಡುಪಿ: ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಶ್ರೀಲಂಕಾ ದೇಶದ ಪ್ರಜೆಯ ಅಂತ್ಯಸಂಸ್ಕಾರವನ್ನು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಬೀಡಿನಗುಡ್ಡೆ ಹಿಂದು ರುದ್ರಭೂಮಿಯಲ್ಲಿ ಮೃತರ ಸಂಬಂಧಿ ಮುರುಳಿಧರನ್ ಹಾಗೂ ಮಗಳು ಸಿಲ್ವಿನ್ ಅವರ ಸಮ್ಮುಖದಲ್ಲಿ ಉಡುಪಿಯ ಸಾಮಾಜಿಕ ಕಾರ್ಯಕರ್ತರ ಸಹಕಾರದಿಂದ ಶುಕ್ರವಾರ ನೆರವೇರಿಸಲಾಯಿತು. ಧಾರ್ಮಿಕ ಪ್ರಕ್ರಿಯೆಗಳು ಅರ್ಚಕ ಕೆ.ಜೆ. ವಿಠಲ ತಂತ್ರಿಗಳ ಪೌರೋಹಿತ್ಯದಲ್ಲಿ ನಡೆದವು. ಮೃತರ ಕುಟುಂಬಕ್ಕೆ ಸಾಮಾಜಿಕ ಕಾರ್ಯಕರ್ತರಾದ ಹರ್ಷವರ್ಧನ್ ಬ್ರಹ್ಮಾವರ, ಸುದರ್ಶನ್ ಬ್ರಹ್ಮಗಿರಿ, ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು, ಅಣ್ಣಪ್ಪ ಸಂಪಿಗೆನಗರ ಅವರು ನೆರೆಯ ದೇಶದ ಬಂಧುಗಳ […]