ಪ್ರಸಿದ್ಧ ಬಾಣಸಿಗ ಮುರಳೀಧರ ಭಟ್ ವಿಧಿವಶ
ಉಡುಪಿ: ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ ಸಕ್ರಿಯ ಸದಸ್ಯ ಮುರಳೀಧರ ಭಟ್ (76) ಅಲ್ಪಕಾಲದ ಅಸೌಖ್ಯದಿಂದ ಉಡುಪಿ ಕಡಿಯಾಳಿಯಲ್ಲಿ ಇರುವ ಪುತ್ರಿಯ ಮನೆಯಲ್ಲಿ ಭಾನುವಾರ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ ತೀವ್ರ ಸಂತಾಪ ವ್ಯಕ್ತಪಡಿಸಿದೆ .