ಅತ್ತೂರು ವಾರ್ಷಿಕ ಮಹೋತ್ಸವದ ಎಂಟನೇ ದಿನ: ಎಲ್ಲರನ್ನು ಪ್ರೀತಿಸುವ ಗುಣ ಬೆಳೆಸಿಕೊಳ್ಳಿ- ಬಿಷಪ್ ಅಲೋಷಿಯಸ್ ಪಾವ್ಲ್
ಅತ್ತೂರು: ರಸ್ತೆಯಲ್ಲಿ ಗಾಯಗೊಂಡು ಬಿದ್ದಿದ್ದ ಅಪರಿಚಿತ ಮನುಷ್ಯನನ್ನು ಎತ್ತಿ, ಉಪಚರಿಸಿ ಶುಶ್ರೂಷೆ ಮಾಡುವ ಸೇವಕನಂತೆ ನಾವು ಕೂಡ ಧರ್ಮ, ಗಡಿ ಹಾಗೂ ಸಂಸ್ಕೃತಿಯ ಭೇದವಿಲ್ಲದೆ ಸಮಾಜದ ಪ್ರತಿಯೊಬ್ಬ ವ್ಯಕ್ತಿಯನ್ನು ಪ್ರೀತಿಸುವುದನ್ನು ಕಲಿಯಬೇಕು ಎಂದು ಮಂಗಳೂರು ಧರ್ಮಪ್ರಾಂತದ ನಿವೃತ್ತ ಧರ್ಮಾಧ್ಯಕ್ಷ ಅಲೋಶಿಯಸ್ ಪಾವ್ಲ್ ಡಿಸೋಜಾ ಅಭಿಪ್ರಾಯಪಟ್ಟರು. ಅತ್ತೂರು ಸಂತ ಲಾರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವದ ಎಂಟನೇ ದಿನವಾದ ಸೋಮವಾರ ಪ್ರಮುಖ ಪೂಜೆಯನ್ನು ನೆರವೇರಿಸಿ ಅವರು ಮಾತನಾಡಿದರು. ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಎಂಟನೇ ದಿನವಾದ ಸೋಮವಾರದಂದು ನಿಗದಿತ ಐದು ಬಲಿಪೂಜೆಗಳು […]