ಗಾಂಧೀಜಿಗೆ ಕುಡುಕರ ಕಾಟ; ತಡೆಗೆ ಆಗ್ರಹ

ಉಡುಪಿ: ಇಲ್ಲಿನ ಸರ್ವಿಸ್ ಬಸ್ಸ್ ನಿಲ್ದಾಣದ ಬಳಿಯ ಗಡಿಯಾರ ಗೋಪುರದ ಅಡಿಯಲ್ಲಿ ಇರುವ ಮಹಾತ್ಮಗಾಂಧಿಜೀ ಪ್ರತಿಮೆಗೆ ಕುಡುಕರ ಕಾಟ ಎದುರಾಗಿದೆ. ಕುಡುಕರು‌ ಕಂಠಪೂರ್ತಿ ಕುಡಿದು ಈ ಪವಿತ್ರವಾದ ಪ್ರತಿಮೆಯ ಕೆಳಗೆ ಮಲಗುವುದು, ಅಲ್ಲೇ ವಾಂತಿ ಮಾಡುವುದು, ಮೂತ್ರ ವಿಸರ್ಜಿಸುವ ಮೂಲಕ ಅಪವಿತ್ರಗೊಳಿಸುತ್ತಿದ್ದಾರೆ. ಅಲ್ಲಾಲ್ಲಿ ಗಲೀಜು ಮಾಡುವ ಮೂಲಕ ಈ ಪವಿತ್ರ ಸ್ಥಳದ ಅಂದವನ್ನು ಸಂಪೂರ್ಣ ಹಾಳು ಮಾಡುತ್ತಿದ್ದಾರೆ ಎಂದು ಉಡುಪಿ ನಾಗರಿಕ ಸಮಿತಿ ದೂರಿದೆ. ಗಾಂಧೀ ಜಯಂತಿ, ಪುಣ್ಯತಿಥಿ ಸಂದರ್ಭದಲ್ಲಿ ಇಲ್ಲಿ ಸಂಘ ಸಂಸ್ಥೆಗಳು, ಆಡಳಿತ ವ್ಯವಸ್ಥೆಗಳು […]