ಹೃದಯಾಘಾತದಿಂದ ಕಾರಿನಲ್ಲೇ ಕೊನೆಯುಸಿರೆಳೆದ ಉಡುಪಿಯ ಕಾರು ಚಾಲಕ

ಉಡುಪಿ: ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಡಿಗೆ ಹೋಗಿ ವಾಪಾಸ್ಸು ಬರುತ್ತಿದ್ದ ಕಾರು ಚಾಲಕನೊಬ್ಬ ಹೃದಯಾಘಾತದಿಂದ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ಸಮೀಪ ಇಂದು ಬೆಳಿಗ್ಗೆ 9.30ರ ವೇಳೆಗೆ ಸಂಭವಿಸಿದೆ. ಉಡುಪಿ ಲಕ್ಷ್ಮೀಂದ್ರನಗರ ನಿವಾಸಿ ದಯಾನಂದ ನಾಯಕ್ ಎಂಬವರು ಮೃತ ಕಾರು ಚಾಲಕ. ಕಟೀಲಿನ ಹೆದ್ದಾರಿ ಪಕ್ಕದಲ್ಲಿ ಕಾರೊಂದು ನಿಂತಿದ್ದನ್ನು ಗಮನಿಸಿದ ಸ್ಥಳೀಯರು, ಕಾರಿನ ಪಕ್ಕಕೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.