ಶಾಲೆಗೆಂದು ತೆರಳಿದ್ದ ಬಾಲಕ ನಾಪತ್ತೆ
ವಿಟ್ಲ: ಶಾಲೆಗೆ ತೆರಳಿದ್ದ ಬಾಲಕನೊಬ್ಬ ನಾಪತ್ತೆಯಾಗಿರುವ ಘಟನೆ ವಿಟ್ಲದ ಕರೋಪಾಡಿಯಲ್ಲಿ ನಡೆದಿದೆ. ವಿಟ್ಲ ಕರೋಪಾಡಿ ನಿವಾಸಿ ಹನುಮಂತ ಎಂಬವರ ಮಗ ಗಣೇಶ್ (15) ನಾಪತ್ತೆಯಾದ ಬಾಲಕ. ಈತನಿಗೆ ಮನೆಯವರು ಆಲ್ ಲೈನ್ ತರಗತಿಗಾಗಿ ಮೊಬೈಲ್ ಒಂದನ್ನು ತೆಗೆಸಿಕೊಟ್ಟಿದ್ದರು. ಆದರೆ ಆತ ಅದರಲ್ಲಿ ಗೇಮ್ ಆಡುತ್ತಿದ್ದ. ಪೋಷಕರು ಎಷ್ಟೇ ಬುದ್ಧಿವಾದ ಹೇಳಿದರೂ ಆತ ಕೇಳುತ್ತಿರಲಿಲ್ಲ. ಹಾಗಾಗಿ ತಂದೆ ಈ ವಿಷಯವನ್ನು ಶಾಲಾ ಶಿಕ್ಷಕರ ಗಮನಕ್ಕೆ ತಂದಿದ್ದಾರೆ. ಅವರು ಗಣೇಶನಿಗೆ ಬುದ್ಧಿವಾದ ಹೇಳಿದ್ದರು. ಅಲ್ಲದೆ ಸೋಮವಾರ ಶಾಲೆಗೆ ಬರುವಂತೆ ತಿಳಿಸಿದ್ದರು. […]