ಸಾವಿರ ಕೋಟಿಯ ಗಡಿ ತಲುಪಿದ ಅಯೋಧ್ಯೆ ರಾಮಮಂದಿರ ನಿಧಿ ಸಂಗ್ರಹ
ಉಡುಪಿ: ಅಯೋಧ್ಯೆ ರಾಮಮಂದಿರ ನಿಧಿ ಸಂಗ್ರಹವು ಸಾವಿರ ಕೋಟಿ ರೂ.ಗಳ ಗಡಿ ತಲುಪಿದೆ ಎಂದು ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು ತಿಳಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಮಮಂದಿರ ನಿಧಿ ಸಂಗ್ರಹ ಅಭಿಯಾನಕ್ಕಾಗಿ ದಕ್ಷಿಣದ ಎಲ್ಲ ರಾಜ್ಯಗಳಲ್ಲಿ ಕೈಗೊಂಡ ಸಂಚಾರದಿಂದ ಅತೀವ ಸಂತಸವಾಗಿದೆ. ಎಲ್ಲ ವರ್ಗದ ಜನ ತುಂಬು ಉತ್ಸಾಹದಿಂದ ದೇಣಿಗೆ ನೀಡುತ್ತಿರುವುದು ಹಿಂದು ಸಮಾಜದ ಸಂಘಟನಾತ್ಮ ದೃಷ್ಟಿಯಿಂದ ಒಂದು ಮಹತ್ವದ ಬೆಳವಣಿಗೆಯಾಗಿದೆ ಎಂದರು. ಜಾತಿಯಾಧಾರಿತ ಮೀಸಲಾತಿಗಾಗಿ ಹೋರಾಟ ಸರಿಯಲ್ಲ. ಆರ್ಥಿಕತೆಯ ಆಧಾರದಲ್ಲಿ ಹಿಂದುಳಿದವರಿಗೆ ನ್ಯಾಯ ಸಿಗಲು […]