ಇದೇ ಮೊದಲ ಬಾರಿಗೆ ತೆಲುಗಿನಲ್ಲೇ ತೆಲಂಗಾಣ ಹೈಕೋರ್ಟ್‌ ತೀರ್ಪು

ಹೈದರಾಬಾದ್ (ತೆಲಂಗಾಣ): ಹಿರಿಯ ನ್ಯಾಯಮೂರ್ತಿ ಪಿ.ನವೀನ್ ರಾವ್ ಮತ್ತು ನ್ಯಾಯಮೂರ್ತಿ ನಾಗೇಶ್ ಭೀಮಪಾಕ ಅವರನ್ನೊಳಗೊಂಡ ಪೀಠವು ಆಸ್ತಿ ವಿವಾದದ ಪ್ರಕರಣದಲ್ಲಿ ಮಂಗಳವಾರ ತೆಲುಗಿನಲ್ಲಿ 44 ಪುಟಗಳ ತೀರ್ಪು ಪ್ರಕಟಿಸಿದೆನ್ಯಾಯಾಂಗದ ತೀರ್ಪುಗಳು ಪ್ರಾದೇಶಿಕ ಭಾಷೆಗಳಲ್ಲೂ ಪ್ರಕಟವಾಗಬೇಕೆಂಬ ಬಲವಾದ ಕೂಗು ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ಇದರ ನಡುವೆ ಇದೇ ಮೊದಲ ಬಾರಿಗೆ ತೆಲಂಗಾಣ ಹೈಕೋರ್ಟ್ ತೆಲುಗಿನಲ್ಲೇ ತೀರ್ಪು ನೀಡುವ ಮೂಲಕ ಇತಿಹಾಸ ಸೃಷ್ಟಿಸಿದೆ. ಸ್ಥಳೀಯ ಭಾಷೆಗಳ ಪ್ರಾಮುಖ್ಯತೆಯನ್ನು ಗಮನಿಸಿ ಇತ್ತೀಚೆಗೆ ನ್ಯಾಯಾಲಯಗಳು ಮಾತೃಭಾಷೆಯತ್ತ ಒಲವು ತೋರಲು ಪ್ರಾರಂಭಿಸಿವೆ. ಸುಪ್ರೀಂ […]