ಬದಲಾಗುತ್ತಿರುವ ಭಾರತಕ್ಕಾಗಿ 5ಜಿ ವೇಗದ ನೆಟ್ ವರ್ಕ್: 5ಜಿ ಸೇವೆ ನೀಡುವ ಆಯ್ದ ದೇಶಗಳ ಗುಂಪಿಗೆ ಭಾರತ ಸೇರ್ಪಡೆ

ನವದೆಹಲಿ: ಭಾರತವು 5ಜಿ ದೂರಸಂಪರ್ಕ ಸೇವೆ ನೀಡುವ ಆಯ್ದ ದೇಶಗಳ ಗುಂಪಿಗೆ ಸೇರಿದೆ. ಶನಿವಾರ ನವದೆಹಲಿಯಲ್ಲಿ ನಡೆದ 6ನೇ ಇಂಡಿಯಾ ಮೊಬೈಲ್ ಕಾಂಗ್ರೆಸ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ 5ಜಿ ಸೇವೆಗಳಿಗೆ ಚಾಲನೆ ನೀಡಿದರು. ಏರ್‌ಟೆಲ್ ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ, ಬೆಂಗಳೂರು ಮತ್ತು ವಾರಣಾಸಿ ಸೇರಿದಂತೆ 8 ನಗರಗಳಲ್ಲಿ 5ಜಿ ಸೇವೆಗಳನ್ನು ಪ್ರಾರಂಭಿಸಿದ್ದರೆ, ರಿಲಯನ್ಸ್ ಜಿಯೋ ದೀಪಾವಳಿಯ ವೇಳೆಗೆ ಪ್ರಾರಂಭಿಸಲಿದೆ. ವೊಡಾಫೋನ್ ಐಡಿಯಾ ಕೂಡ ಶೀಘ್ರದಲ್ಲೇ 5ಜಿ ಸೇವೆಯನ್ನು ಪ್ರಾರಂಭಿಸಲಿದೆ. ಇನ್ನು ಮುಂದೆ 4ಜಿ […]

ಭಾರತದ ಪ್ರಪ್ರಥಮ 5ಜಿ ತರಂಗಾಂತರ ಹರಾಜಿನ ಮೊದಲ ದಿನದಂದು 1.45 ಲಕ್ಷ ಕೋಟಿ ರೂ ದಾಖಲೆ ಬಿಡ್ಡಿಂಗ್ ಸ್ವೀಕರಿಸಿದ ಕೇಂದ್ರ ಸರ್ಕಾರ

ನವದೆಹಲಿ: ಭಾರತದ ಪ್ರಪ್ರಥಮ 5ಜಿ ತರಂಗಾಂತರ ಹರಾಜಿನ ಮೊದಲ ದಿನದಂದು ಸರ್ಕಾರವು 1.45 ಲಕ್ಷ ಕೋಟಿ ರೂಪಾಯಿಗಳ ದಾಖಲೆಯ ಬಿಡ್ಡಿಂಗ್ ಅನ್ನು ಸ್ವೀಕರಿಸಿದೆ. ಮೊದಲ ದಿನದಂದು ನಿರ್ಣಾಯಕ 700 MHz ಬ್ಯಾಂಡ್ ಮೊದಲ ಬಾರಿಗೆ ಬಿಡ್ಡಿಂಗ್ ಕಂಡಿತು. ಮಧ್ಯಮ-ಬ್ಯಾಂಡ್ (3.3-3.67 GHz) ಮತ್ತು ಉನ್ನತ-ಬ್ಯಾಂಡ್ (26 GHz) ಏರ್‌ವೇವ್‌ಗಳು ಬಿಡ್ಡುದಾರರಲ್ಲಿ ಬಲವಾದ ಆಸಕ್ತಿಯನ್ನು ಆಕರ್ಷಿಸಿದವು. ಎಲ್ಲಾ ಬಿಡ್‌ಗಳು ಮೂಲ ಬೆಲೆಯಲ್ಲಿವೆ. ಎಲ್ಲಾ ಮೂರು ಖಾಸಗಿ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾಗಳು, […]