ಕ್ರೈಮ್ ಥ್ರಿಲ್ಲರ್ ಕಥಾಹಂದರದ ಸಿನಿಮಾ “ಅನುಕ್ತ”: ಫೆ 01ರಂದು ತೆರೆಗೆ
ಹೊಸಬರ ಅನುಕ್ತ ಚಿತ್ರದ ಟ್ರೈಲರ್ ಸಾಮಾಜಿಕ ಜಾಲತಾಣದಲ್ಲಿ ಅದಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೊಂದು ಕ್ರೈಮ್ ಥ್ರಿಲ್ಲರ್ ಕಥಾಹಂದರದ ಚಿತ್ರ ಒಂದೆಡೆ ದೈವಾರಾಧನೆ ಮತ್ತೊಂದೆಡೆ ಮರ್ಡರ್ ಮಿಸ್ಟರಿ ಅವೆರಡನ್ನು ಹೊಂದಿಸಿ ಹೊಸದೊಂದು ಕತೆ ಹೇಳ ಹೊರಟ ಚಿತ್ರ ಅನುಕ್ತ. ಬಿಡುಗಡೆಯಾದ ಎರಡೇ ದಿನದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಈ ಚಿತ್ರದ ಟ್ರೈಲರ್ ವೈರಲ್ ಆಗಿದ್ದು. ಹೊಸಬರ ಸಿನಿಮಾ ಟ್ರೈಲರ್ ಈ ಪರಿ ಸದ್ದು ಮಾಡುತ್ತಿರುವುದು ಸಿನಿಮಾದ ಬಗ್ಗೆ ನಿರೀಕ್ಷೆಯನ್ನು ಹೆಚ್ಚಿಸಿದೆ. ಈ ಹಿಂದೆ ಸದ್ದು ಮಾಡಿದ್ದ ರಂಗಿತರಂಗ ಹಾಗೂ ಉಳಿದವರು […]