ಜಿಲ್ಲಾ ಮಟ್ಟದ ವಿಶೇಷ ಶಿಕ್ಷಕರ ದಿನಾಚರಣೆ

ಉಡುಪಿ: ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಉಡುಪಿ, ಲಯನ್ಸ್ ಜಿಲ್ಲೆ 317 ಸಿ ಮತ್ತು ಲಿಯೋ ಕ್ಲಬ್ 317 ಸಿ, ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ಉಡುಪಿ ಇಂದ್ರಾಳಿ, ಆಶಾ ನಿಲಯ ವಿಶೇಷ ಮಕ್ಕಳ ವಸತಿ ಶಾಲೆ ಮತ್ತು ತರಬೇತಿ ಕೇಂದ್ರ, ವಿಶೇಷ ಶಿಕ್ಷಕರ ಹಾಗೂ ಶಿಕ್ಷಕೇತರರ ಸಂಘ ಉಡುಪಿ ಜಿಲ್ಲೆಇದರ ಸಹಭಾಗಿತ್ವದಲ್ಲಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯನ್ನು ಮಂಗಳವಾರದಂದು ಆಶಾನಿಲಯದಲ್ಲಿ ಆಚರಿಸಲಾಯಿತು. ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ದೀಪ ಬೆಳಗಿಸಿ ಚಾಲನೆ […]

ರಾಜ್ಯಮಟ್ಟದ 6ನೇ ಶಿಕ್ಷಕ ಸಾಹಿತಿಗಳ ಸಮ್ಮೇಳನ: ಮನೋಜ್ ಕಡಬ ಇವರಿಗೆ ಅಮೃತ ಸಮ್ಮಾನ್ ಪ್ರಶಸ್ತಿ

ಉಡುಪಿ: ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು (ರಿ), ಕೇಂದ್ರ ಸಮಿತಿ ಹುಬ್ಬಳ್ಳಿ ಮತ್ತು ಶ್ರೀ ಜನಾರ್ದನ ಮಹಾಂಕಾಳಿ ದೇವಸ್ಥಾನ ಸಮಿತಿ, ಅಂಬಲಪಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಸೆಪ್ಟಂಬರ್ 5 ಮಂಗಳವಾರದಂದು ಅಂಬಲಪಾಡಿಯಲ್ಲಿ ನಡೆದ ಶಿಕ್ಷಕ ಸಾಹಿತಿಗಳ 6ನೇ ಸಮ್ಮೇಳನ ಸಂಭ್ರಮ ಕಾರ್ಯಕ್ರಮದಲ್ಲಿ ಇತರ ಸಾಧಕರೊಂದಿಗೆ ಮನೋಜ್ ಕಡಬ ಅವರು ರಾಜ್ಯಮಟ್ಟದ ಅಮೃತ ಸಮ್ಮಾನ ಗೌರವ ಪ್ರಶಸ್ತಿಯನ್ನು ಸ್ವೀಕರಿಸಿದರು. ಉಡುಪಿಯ ಶೆಫಿನ್ಸ್ ಇಂಗ್ಲಿಷ್ ಅಕಾಡೆಮಿಯ ನಿರ್ದೇಶಕ ಮತ್ತು ಸ್ಪೋಕನ್ ಇಂಗ್ಲಿಷ್ ತರಬೇತುದಾರರಾದ ಅವರು ದಕ್ಷಿಣ ಕನ್ನಡ ಮತ್ತು ಉಡುಪಿ […]

ಭವಾನಿ ವಿ. ಶೆಟ್ಟಿ ಪುಳಿಮಾರು ಇವರಿಗೆ ವಿಶ್ವ ಸಂಸ್ಕೃತಿ ಪುರಸ್ಕಾರ

ಉಡುಪಿ: ವೃತ್ತಿಯಿಂದ ನಿವೃತ್ತರಾಗಿದ್ದರೂ ಎಲ್ಲ ಕಾಲದಲ್ಲೂ ಜನರು, ಶಿಷ್ಯರು ಗುರುತಿಸಿ ಗೌರವಿಸುವ ಶಿಕ್ಷಕ ವೃತ್ತಿ ಪೂಜನೀಯವಾಗಿದ್ದು ನಿತ್ಯ ಜನ ಮನ್ನಣೆ ಪಡೆಯುವಂತದ್ದು ಎಂದು ಕಸಾಪ ವಿಶ್ವ ಸಂಸ್ಕೃತಿ ಪುರಸ್ಕಾರ ಪುರಸ್ಕ್ರತೆ ಭವಾನಿ ವಿ. ಶೆಟ್ಟಿ ಪುಳಿಮಾರು ಅಭಿಪ್ರಾಯಪಟ್ಟರು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಶಿಕ್ಷಕರ ದಿನಾಚರಣೆ ನಿವೃತ್ತ ಶಿಕ್ಷಕರಲ್ಲಿ ಸಾರ್ಥಕ ಹಾಗೂ ಸಂತಸದ ಭಾವ ತುಂಬುತ್ತದೆ ಎಂದರು. ಈ ಸಂದರ್ಭದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಸ್ಥಾಪಕಾಧ್ಯಕ್ಷ […]

ವಿದ್ಯಾರ್ಥಿಗಳಂತೆ ಶಿಕ್ಷಕರೂ ಸದಾ ಅಧ್ಯಯನಶೀಲರಾಗಿರಬೇಕು: ಪ್ರೊ.ಬಿ.ಪದ್ಮನಾಭ ಗೌಡ

ಕಾರ್ಕಳ: ಶಿಕ್ಷಣ ಮತ್ತು ಶಿಕ್ಷಕ ವೃತ್ತಿಗಳು ಅತ್ಯಂತ ಶ್ರೇಷ್ಠವಾದದ್ದು ವಿದ್ಯಾರ್ಥಿಗಳಲ್ಲಿ ಸದ್ಭಾವನೆಯನ್ನು ಬೆಳೆಸುತ್ತಾ, ಶಿಕ್ಷಕನೂ ಅಧ್ಯಯನ ಶೀಲನಾಗಬೇಕು. ನಿರಂತರವಾಗಿ ಗುರುತರವಾದ ಜವಾಬ್ದಾರಿಯಿಂದ ಬೋಧನೆ ಮಾಡುವವರಾಗಬೇಕು ಎಂದು ಪ್ರೊ.ಬಿ.ಪದ್ಮನಾಭ ಗೌಡ ಕರೆ ನೀಡಿದರು. ಅವರು ಕಾರ್ಕಳದ ಕ್ರಿಯೇಟಿವ್ ಪ. ಪೂ. ಕಾಲೇಜಿನಲ್ಲಿ ಶಿಕ್ಷಕರ ದಿನದ ಪ್ರಯುಕ್ತ ಆಚರಿಸಲಾದ ‘ಗುರುದೇವೋ ಭವ’ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇನ್ನೋರ್ವ ಅತಿಥಿ ಚೇತನಾ ವಿಶೇಷ ಶಾಲೆಯ ಮುಖ್ಯೋಪಾಧ್ಯಾಯಿನಿ ಹೇಮಲತಾ ಶೆಟ್ಟಿ ಮಾತನಾಡಿ, ಗುರುಗಳೆಂದರೆ ಅಪಾರ ಗೌರವದಿಂದ ಕಾಣಬೇಕಾದ ವ್ಯಕ್ತಿ. […]

ದೊಡ್ಡಣ್ಣಗುಡ್ಡೆ ಪ್ರಜ್ಞ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

ದೊಡ್ಡಣ್ಣಗುಡ್ಡೆ: ಇಲ್ಲಿನ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಜ್ಞ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರಿಗಾಗಿ ಹಮ್ಮಿಕೊಂಡ ವಿವಿಧ ಸ್ಮರ್ಧಾತ್ಮಕ ಕಾರ್ಯಕ್ರಮಗಳನ್ನು ಶಾಲಾ ಸಂಸ್ಥಾಪಕ ರಮಾನಂದ ಗುರೂಜಿಯವರು ಉದ್ಘಾಟಿಸಿದರು. ಹಲವು ಪ್ರತಿಭಾನ್ವಿತ ಶಿಕ್ಷಕರನ್ನು ಒಳಗೊಂಡ ಈ ಶಾಲೆಯಲ್ಲಿ ವಿದ್ಯಾರ್ಥಿಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ಪರ್ಧಾತ್ಮಕವಾಗಿ ಪಾಲ್ಗೊಂಡು ವಿದ್ಯಾರ್ಥಿಗಳ ಸಂಭ್ರಮಾಚರಣೆಗೆ ಕಾರಣರಾದರು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಡುವಿನ ಬಾಂಧವ್ಯ ಭಾವನೆಗಳ ಕೊಂಡಿ ಇದ್ದಂತೆ. ಪ್ರಾಥಮಿಕ […]