ಯೋಗ್ಯ ನಾಗರಿಕರನ್ನು ಸಮಾಜಕ್ಕೆ ನೀಡುವ‌ ಅನಿವಾರ್ಯತೆ-ಶಕ್ತಿ ಶಿಕ್ಷಕರಿಗಿದೆ: ಕೋಟ

ಉಡುಪಿ: ಪ್ರಸ್ತುತ ಸಮಾಜಕ್ಕೆ ಬೇಕಾದ ಯೋಗ್ಯ ನಾಗರಿಕರನ್ನು ಬೆಳೆಸುವ ಅವಶ್ಯಕತೆ, ಅನಿವಾರ್ಯತೆ ಮತ್ತು ಶಕ್ತಿ ಇದೆ. ಎಂಜಿನಿಯರ್‌, ಡಾಕ್ಟರ್‌, ರಾಜಕಾರಣಿಗಳಿಂದ ಈ ಕಾರ್ಯ ಅಸಾಧ್ಯ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಉಡುಪಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣಾ ಸಮಿತಿ ಹಾಗೂ ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಸಹಯೋಗದಲ್ಲಿ ಅಂಬಲಪಾಡಿ ಶ್ಯಾಮಿಲಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಕರ ದಿನಾಚರಣೆ ಅಂದರೆ ಶಿಕ್ಷಕರು ಶಿಕ್ಷಣ ಕ್ಷೇತ್ರಕ್ಕೆ […]