4 ವಿಶ್ವದಾಖಲೆಗಳ ಸರದಾರಿಣಿ:ತನುಶ್ರೀ ಪಿತ್ರೋಡಿ
ಕಳೆದ ತಿಂಗಳಿನಲ್ಲಿ ಉಡುಪಿಯ ಸೈಂಟ್ ಸಿಸಿಲಿಸ್ ವಿದ್ಯಾಸಂಸ್ಥೆಯ ಕ್ರೀಡಾಂಗಣದ ಏಕಕಾಲದಲ್ಲಿ 2 ವಿಶ್ವದಾಖಲೆಗೆ ಸಾಕ್ಷಿಯಾಯಿತು.ಸಾವಿರಾರು ಪ್ರೇಕ್ಷಕರ ಈ ಅಸಾಧಾರಣ 10 ರ ಪೋರಿ ತನುಶ್ರೀ ಪಿತ್ರೋಡಿಯ ಪ್ರದರ್ಶನ ನೋಡಿ ಬೆಕ್ಕಸಬೆರಗಾದರು. ತನುಶ್ರೀ ಸಾಹಸಗಾಥೆಯ ಕಿರು ಪರಿಚಯ: ನೃತ್ಯ ಹಾಗೂ ಯೋಗ ಸಾಧನೆಯ ಮೂಲಕ ವಿಶ್ವವನ್ನೇ ಗಮನ ಸೆಳೆದ ಬಹುಮುಖಪ್ರತಿಭೆಯ,ವಿಶ್ವದಾಖಲೆಗಳ ಸರದಾರಿಣಿ,ನಾಟ್ಯ ಮಯೂರಿ ಬಿರುದಾಂಕಿತೆ ತನುಶ್ರೀ ಪಿತ್ರೋಡಿ ಅವರು ಸಂಧ್ಯಾ,ಉದಯ್ ಕುಮಾರ್ ದಂಪತಿ ಪುತ್ರಿ .ಪ್ರಸ್ತುತ ಸೈಂಟ್ ಸಿಸಿಲಿಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ 5 ನೇ ತರಗತಿಯಲ್ಲಿ ಕಲಿಯುತ್ತಿರುವ ತನುಶ್ರೀ […]