ಮಂಗಳೂರು: ತಣ್ಣೀರುಬಾವಿ ಬೀಚ್ ನಲ್ಲಿ ಸಮುದ್ರ ಪೂಜೆ

ಮಂಗಳೂರು: ಮೀನುಗಾರಿಕೆ ಆರಂಭವಾದ ಹಿನ್ನೆಲೆಯಲ್ಲಿ ಗುರುವಾರ ಮಂಗಳೂರಿನ ತಣ್ಣೀರುವಾವಿ ಬೀಚ್‌ನಲ್ಲಿ ಸಮುದ್ರ ಪೂಜೆ‌ ನೆರವೇರಿಸಲಾಯಿತು. ಸಮುದ್ರದಲ್ಲಿ ಮತ್ಸ್ಯ ಸಂಪತ್ತು ಹೆಚ್ಚಾಗಿ ಮೀನುಗಾರರಿಗೆ ಯಾವುದೇ ಅಪಾಯ ಸಂಭವಿಸದೇ ಇರಲಿ ಎಂದು ಪ್ರಾರ್ಥಿಸಲಾಯಿತು. ಮಂಗಳೂರಿ‌ನ ಕದ್ರಿ ಕದಳಿ ಮಠದ ಸ್ವಾಮಿಜೀಯವರು ಸಮುದ್ರಕ್ಕೆ ಹಾಲು ಎರೆಯುವ ಮೂಲಕ ಪೂಜೆಯ ಸಮುದ್ರ ಪೂಜೆ ನೆರವೇರಿಸಿದರು. ಸಮುದ್ರ ಪೂಜೆಗೂ ಮೊದಲು ಬೊಕ್ಕಪಟ್ಣದಿಂದ ಮೆರವಣಿಗೆ, ಮೀನುಗಾರರ ಭಜನೆ ನೆರವೇರಿತು. ಸಮುದ್ರ ಪೂಜೆಯಲ್ಲಿ ಮೀನುಗಾರರ ಮುಖಂಡರು ಹಾಗೂ ಮೀನುಗಾರರು ಭಾಗವಹಿಸಿದರು.