ಒಟಿಟಿಗೆ ಬರಲಿದೆ ಜಲ್ಲಿಕಟ್ಟು ಆಧಾರಿತ ‘ಪೆಟ್ಟೈಕಾಲಿ’ ವೆಬ್ ಸರಣಿ: ಟ್ರೈಲರ್ ಹಂಚಿಕೊಂಡ ಕನ್ನಡಿಗ ಕಿಶೋರ್

ಖ್ಯಾತ ನಿರ್ದೇಶಕ ವೆಟ್ರಿ ಮಾರನ್ ಅವರ ‘ಪೆಟ್ಟೈಕಾಲಿ’, ತಮಿಳುನಾಡಿನ ಗೂಳಿ ಪಳಗಿಸುವ ಕ್ರೀಡೆಯಾದ ಜಲ್ಲಿಕಟ್ಟು ಆಧರಿಸಿದ ಮೊದಲ ವೆಬ್ ಸರಣಿ, ಈ ವರ್ಷ ದೀಪಾವಳಿಯಿಂದ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಪ್ರದರ್ಶನಗೊಳ್ಳಲಿದೆ. ವೆಟ್ರಿ ಮಾರನ್ ಅವರ ‘ಪೆಟ್ಟೈಕಾಳಿ’ ಚಿತ್ರವನ್ನು ಅವರ ಬಹುಕಾಲದ ಸಹಾಯಕ ರಾಜ್ ಕುಮಾರ್ ನಿರ್ದೇಶಿಸಿದ್ದಾರೆ. ಸಾಕಷ್ಟು ಆಸಕ್ತಿಯನ್ನು ಹುಟ್ಟುಹಾಕಿರುವ ಈ ಸರಣಿಯು ಒಟಿಟಿ ಪ್ಲಾಟ್‌ಫಾರ್ಮ್ ಆಹಾ ತಮಿಳಿನಲ್ಲಿ ತೆರೆಕಾಣಲಿದೆ. ಈ ಸರಣಿಯು ಪ್ರೇಕ್ಷಕರನ್ನು ಹಿಂದೆಂದೂ ನೋಡಿರದ ಆಳವಾದ ಜಲ್ಲಿಕಟ್ಟು ಜಗತ್ತಿನೊಳಗೆ ತೆಗೆದುಕೊಂಡು ಹೋಗಲಿದೆ ಎಂದು ನಿರೀಕ್ಷಿಸಲಾಗಿದೆ. ತುಳುನಾಡಿನ […]
ಇದು ಮಾತ್ರೆ ಕಾಗದ ಅಲ್ಲ ಮದುವೆ ಆಮಂತ್ರಣ: ತಮಿಳುನಾಡಿನ ಔಷಧಿಕಾರ ಜೋಡಿಯ ವಿನೂತನ ಮದುವೆ ಪತ್ರಿಕೆ

ಚೆನ್ನೈ: ತಮಿಳುನಾಡಿನ ಔಷಧಿಕಾರ ಜೋಡಿಯೊಂದು ವಿಶಿಷ್ಟವಾದ ಮದುವೆಯ ಆಮಂತ್ರಣ ಪತ್ರವನ್ನು ಮುದ್ರಣ ಮಾಡಿದ್ದಾರೆ. ತಮ್ಮ ಸೃಜನಾತ್ಮಕ ಚಿಂತನೆಯನ್ನು ಓರೆಗೆ ಹಚ್ಚಿರುವ ತಿರುವಣ್ಣಾಮಲೈ ದಂಪತಿಗಳು ಥೇಟ್ ಮಾತ್ರೆ ಕಾಗದದ ಹಿಂಭಾಗದಂತೆಯೇ ಕಾಣುವ ತಮ್ಮ ಮದುವೆ ಆಹ್ವಾನ ಪತ್ರವನ್ನು ವಿನ್ಯಾಸಗೊಳಿಸಿ ಎಲ್ಲರನ್ನೂ ಚಕಿತಗೊಳಿಸಿದ್ದಾರೆ. ಟ್ವಿಟರ್ ಬಳಕೆದಾರರಾದ ಹರ್ಷ್ ಗೋಯೆಂಕಾ ಅವರು ಹಂಚಿಕೊಂಡಿರುವ ಆಹ್ವಾನ ಪತ್ರಿಕೆಯು ‘ಎಜಿಲರಸನ್ ಮತ್ತು ವಸಂತಕುಮಾರಿ ವಿವಾಹ’ ಎಂಬ ದಪ್ಪ ಅಕ್ಷರಗಳನ್ನು ತೋರಿಸುತ್ತದೆ. ಫಕ್ಕನೆ ನೋಡಿದರೆ ಇದೊಂದು ಮಾತ್ರೆ ಕಾಗದವೋ ಎನ್ನುವ ಭಾವನೆ ಬರುತ್ತದೆ. ‘ಎಲ್ಲಾ ಸ್ನೇಹಿತರು […]
ತಮಿಳುನಾಡಿನಲ್ಲಿ ಇಂಧನ ಬೆಲೆ ವಿರುದ್ದ ಪ್ರತಿಭಟನೆ: ಬಿಜೆಪಿ ನಾಯಕ ಅಣ್ಣಾಮಲೈ ವಿರುದ್ದ ಪ್ರಕರಣ ದಾಖಲು

ಚೆನ್ನೈ: ತಮಿಳುನಾಡಿನ ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ವಿರುದ್ಧ ಅನುಮತಿ ಪಡೆಯದೆ ರಾಜ್ಯ ಸಚಿವಾಲಯದತ್ತ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಎಂಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿಮೆ ಮಾಡಬೇಕೆಂದು ರಾಜು ಬಿಜೆಪಿ ಒತ್ತಾಯಿಸುತ್ತಿದೆ. ಅಣ್ಣಾಮಲೈ ಮತ್ತು 5,000 ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರ ವಿರುದ್ಧ ತಮಿಳುನಾಡು ಪೋಲೀಸರು ಪ್ರಕರಣ ದಾಖಲಿಸಿದ್ದಾರೆ. ಮೇ 31 ರಂದು ಅಣ್ಣಾಮಲೈ ಅವರೊಂದಿಗೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಾ ರಾಜ್ಯದ […]
ಮಾತೃದಿನದಂದು ಇಡ್ಲಿ ಅಮ್ಮನಿಗೆ ಹೊಸ ಮನೆ ಉಡುಗೊರೆ ನೀಡಿದ ಆನಂದ್ ಮಹೀಂದ್ರಾ!

2019 ರ ಕೊರೋನಾ ಕಾಲದಲ್ಲಿ ‘ಇಡ್ಲಿ ಅಮ್ಮಾ’ ಎಂದೂ ಕರೆಯಲ್ಪಡುವ ಕೆ ಕಮಲಾತಾಲ್ ಎಂಬ ಮಹಿಳೆ ಲಾಕ್‌ಡೌನ್ ಸಮಯದಲ್ಲಿ ಕೇವಲ 1 ರೂಪಾಯಿಗೆ ಇಡ್ಲಿಗಳನ್ನು ಮಾರಾಟ ಮಾಡುವ ಮೂಲಕ ಮನೆ ಮಾತಾಗಿದ್ದರು. 85 ವರ್ಷ ವಯಸ್ಸಿನ ಈಕೆ ಕಳೆದ ಮೂವತ್ತು ವರ್ಷಗಳಿಂದ ಈ ಕಾಯಕದಲ್ಲಿ ನಿರತರಾಗಿದ್ದಾರೆ. ಅವರ ಬಗ್ಗೆ ವರದಿಗಳು ವೈರಲ್ ಆದ ಬಳಿಕ ದೇಶದ ಹೆಸರಾಂತ ಉದ್ಯಮಿ ಆನಂದ್ ಮಹೀಂದ್ರಾ ಆಕೆಯ ಸಮರ್ಪಣೆಯಿಂದ ಪ್ರಭಾವಿತರಾಗಿ ಆಕೆಗೊಂದು ಮನೆ ನಿರ್ಮಿಸಿಕೊಡುವ ವಾಗ್ದನ ಮಾಡಿದ್ದರು. ತನ್ನ ವಾಗ್ದಾನಕ್ಕೆ ಬದ್ದರಾದ […]