5 ವರ್ಷಗಳ ಬಳಿಕ ತಮಿಳುನಾಡಿಗೆ ಆಗಮಿಸಿದ ಸೋನಿಯಾ ಗಾಂಧಿ: ಡಿಎಂಕೆ ಸಮಾವೇಶ
ಚೆನ್ನೈ (ತಮಿಳುನಾಡು): ಶುಕ್ರವಾರ ಚೆನ್ನೈಗೆ ಆಗಮಿಸಿದ್ದ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಚೆನ್ನೈ ವಿಮಾನ ನಿಲ್ದಾಣ ಸ್ವಾಗತಿಸಿದರು.ಮಹಿಳಾ ಹಕ್ಕುಗಳ ಸಮಾವೇಶಕ್ಕಾಗಿ ತಮಿಳುನಾಡಿಗೆ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಆಗಮಿಸಿದ್ದು ಸಿಎಂ ಸ್ಟಾಲಿನ್ ಪುಸ್ತಕ ನೀಡಿ ಸ್ವಾಗತಿಸಿದರು. ಮಾಜಿ ಮುಖ್ಯಮಂತ್ರಿ ದಿವಂಗತ ಟಿ.ಎನ್.ಕರುಣಾನಿಧಿ ಅವರ ಶತಮಾನೋತ್ಸವದ ನಿಮಿತ್ತ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದಲ್ಲಿ ಡಿಎಂಕೆ ಮಹಿಳಾ ತಂಡದ ವತಿಯಿಂದ ಇಂದು ನಂದನಂ ವೈಎಂಸಿಎ ಮೈದಾನದಲ್ಲಿ ‘ಮಹಿಳಾ ಹಕ್ಕುಗಳ ಸಮಾವೇಶ’ […]