ತಮಿಳುನಾಡು: ಎಕ್ಸ್‌ಪ್ರೆಸ್ ರೈಲು ಗೂಡ್ಸ್ ರೈಲಿಗೆ ಢಿಕ್ಕಿ: ಹಲವರಿಗೆ ಗಾಯ
ತಿರುವಲ್ಲೂರು(ತಮಿಳುನಾಡು): ಇಲ್ಲಿ ಎಕ್ಸ್‌ಪ್ರೆಸ್ ರೈಲೊಂದು ಗೂಡ್ಸ್ ರೇಕ್‌ಗೆ ಢಿಕ್ಕಿ ಹೊಡೆದಿದ್ದು, ಪ್ಯಾಸೆಂಜರ್ ರೈಲಿನ ಎರಡು ಬೋಗಿಗಳು ಬೆಂಕಿಗೆ ಆಹುತಿಯಾಗಿವೆ. ಎಕ್ಸ್‌ಪ್ರೆಸ್ ರೈಲಿನ ಕನಿಷ್ಠ 6 ಬೋಗಿಗಳು ಹಳಿತಪ್ಪಿದ್ದು, ಕೆಲವು ಪ್ರಯಾಣಿಕರು ಗಾಯಗೊಂಡ ಬಗ್ಗೆ ವರದಿಯಾಗಿದೆ. 12578 ಮೈಸೂರು-ದರ್ಬಂಗಾ ಎಕ್ಸ್‌ಪ್ರೆಸ್ ಚೆನ್ನೈ ಹೊರವಲಯದ ಕವರೈಪೆಟ್ಟೈನಲ್ಲಿ ರಾತ್ರಿ 8:50 ಕ್ಕೆ ನಿಂತಿದ್ದ ಗೂಡ್ಸ್ ರೈಲಿಗೆ ಢಿಕ್ಕಿ ಹೊಡೆದಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡಗಳು ಮತ್ತು ಆಂಬ್ಯುಲೆನ್ಸ್‌ಗಳನ್ನು ಸ್ಥಳಕ್ಕೆ ರವಾನಿಸಲಾಗಿದ್ದು ರಕ್ಷಣ ಕಾರ್ಯ ಭರದಿಂದ ನಡೆಸಲಾಗುತ್ತಿದೆ ಎಂದು ರೈಲ್ವೆ […]