ತಮಿಳಿನ ಖ್ಯಾತ ನಟಿ ನೇಣಿಗೆ ಶರಣು

ಚೆನ್ನೈ: ತಮಿಳಿನ ಖ್ಯಾತ ನಟಿ ವಿಜೆ ಚಿತ್ರಾ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೂನಮಲ್ಲೆ ಠಾಣಾ ವ್ಯಾಪ್ತಿಯ ಹೋಟೆಲ್ ವೊಂದರ ಕೊಠಡಿಯಲ್ಲಿ ಚಿತ್ರಾ ಮೃತದೇಹ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ, ಚಿತ್ರಾಗೆ ಚೆನ್ನೈ ಮೂಲದ ಹೇಮಂತ್ ಎಂಬುವವರ ಜೊತೆ ವಿವಾಹ ನಿಶ್ಚಯವಾಗಿತ್ತು. ಅಲ್ಲದೆ, ಮದುವೆ ನಿಶ್ಚಯವಾದಾಗಿನಿಂದ ಚಿತ್ರಾ ಹೇಮಂತ್ ಜೊತೆಯಲ್ಲೇ ಇದ್ದರು ಎನ್ನಲಾಗಿದೆ. ತಮಿಳು ಸಿನಿಮಾ ಹಾಗೂ ಕೆಲವು ಧಾರಾವಾಹಿಗಳಲ್ಲಿ ಚಿತ್ರಾ ನಟಿಸಿದ್ದಾರೆ. ಪೂನಮಲ್ಲೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.