ಜೀರ್ಣೋದ್ಧಾರಕ್ಕೆ ಅಣಿಯಾದ 800 ವರ್ಷಗಳಷ್ಟು ಪುರಾತನದ ಎಡ ಕೈಯಲ್ಲಿ ಆಶೀರ್ವಾದ ನೀಡುವ ಬೈಂದೂರಿನ ಯತ್ತಾಬೇರು ದುರ್ಗಾಪರಮೇಶ್ವರಿ ಅಮ್ಮನವರ ದೇಗುಲ.
ಪ್ರಾಚೀನ ದೇಗುಲವನ್ನು ಜೀರ್ಣೋದ್ಧಾರ ಮಾಡುವುದು ಅತ್ಯಂತ ಪುಣ್ಯದ ಮತ್ತು ಅತೀ ಶ್ರೇಷ್ಠ ಕೆಲಸ ಎಂದು ಶಾಸ್ತ್ರಗಳಲ್ಲಿ ಮತ್ತು ಬಲ್ಲವರು ಹೇಳುತ್ತಾರೆ. ಆ ನಿಟ್ಟಿನಲ್ಲಿ 800 ವರ್ಷಗಳಿಗೂ ಅಧಿಕ ಇತಿಹಾಸವನ್ನು ಹೊಂದಿರುವ ಬೈಂದೂರಿನ ತಗ್ಗರ್ಸೆ ಗ್ರಾಮದ ಯತ್ತಾಬೇರುನಲ್ಲಿರುವ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ದೇವಸ್ಥಾನ. ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಜೈನರ ಕಾಲದಲ್ಲಿ ಪ್ರತಿಷ್ಟಾಪನೆಗೊಂಡಿತ್ತು. ಇದಕ್ಕೆ ಸಾಕ್ಷಿಯಾಗಿ ಈ ಅಮ್ಮನವರನ್ನು ಬಹಳ ಹಿಂದೆ ಜೈನರ ಆರಾಧ್ಯ ದೇವಿಯಾದ ಪದ್ಮಾವತಿ ಅಮ್ಮನವರು ಎಂದು ಕರೆಯುತ್ತಿದ್ದರಂತೆ ಮತ್ತು ಇಲ್ಲಿ ಪರಿವಾರ ದೈವಗಳಾಗಿ ಜೈನ ಜಟ್ಟಿಗೇಶ್ವರ […]