ಕಾಲಿಗೆ ಕೋಳ ಬಿಗಿದು ಪಂಚಗಂಗಾವಳಿ ನದಿಯಲ್ಲಿ ಈಜಿದ ಛಲಗಾರ: ದಾಖಲೆ ಬರೆದ್ರು ಖಾರ್ವಿಕೇರಿಯ ಸಂಪತ್
-ಶ್ರೀಕಾಂತ ಹೆಮ್ಮಾಡಿ, ಕುಂದಾಪುರ ಇಲ್ಲಿನ ಖಾರ್ವಿಕೇರಿಯ ಈಜು ಪ್ರತಿಭೆ ಕುಂದಾಪುರ ಭಂಡಾರ್ಸ್‍ಕಾರ್ಸ್ ಕಾಲೇಜಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿ ಸಂಪತ್ ಡಿ ಖಾರ್ವಿ ಕಾಲಿಗೆ ಸರಪಳಿ ಕಟ್ಟಿ 25ಕಿಮೀ ಈಜುವ ಮೂಲಕ ನೂತನ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಭಾನುವಾರ ಮಧ್ಯಾಹ್ನ 2ಗಂಟೆಗೆ ಬಸ್ರೂರು ರೈಲು ಸೇತುವೆ ಬಳಿಯಿಂದ ನದಿಗೆ ಇಳಿದು ಈಜಲು ಆರಂಭಿಸಿದ ಸಂಪತ್ ಸಂಜೆ 5ಗಂಟೆ 5ನಿಮಿಷಕ್ಕೆ 25ಕಿ.ಮೀ ದೂರದ ಗಂಗೊಳ್ಳಿ ಬಂದರುವಿಗೆ ತಲುಪಿದ್ದಾರೆ. ಮಹಾಕಾಳಿ ದೇವಸ್ಥಾನದ ಅಧ್ಯಕ್ಷ ಪ್ರಕಾಶ್ ಖಾರ್ವಿಯವರು ಸಂಪತ್ ಅವರ ಕಾಲುಗಳಿಗೆ ಮಧ್ಯಾಹ್ನ […]