ಜ.12 ರ ರಾಜ್ಯ ಮಟ್ಟದ ‘ಯುವ ಸಂಗಮ’ದಲ್ಲಿ ಜನಪ್ರಿಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗಿ: ಕುಯಿಲಾಡಿ
ಉಡುಪಿ: ವಿಶ್ವ ಕಂಡ ಶ್ರೇಷ್ಠ ದಾರ್ಶನಿಕ, ರಾಷ್ಟ್ರೀಯ ಏಕತೆ ಮತ್ತು ಸಾಂಸ್ಕೃತಿಕ ಜಾಗೃತಿಯ ಪ್ರತೀಕ, ಯುವ ಜನತೆಯ ಪ್ರೇರಣಾ ಶಕ್ತಿ ಸ್ವಾಮಿ ವಿವೇಕಾನಂದರವರ ಜನ್ಮ ದಿನ ಜನವರಿ12. ಅಂದು ಆಚರಿಸಲ್ಪಡುವ ‘ರಾಷ್ಟ್ರೀಯ ಯುವ ದಿನಾಚರಣೆ’ಯ ಅಂಗವಾಗಿ ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಉಡುಪಿಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ‘ಯುವ ಸಂಗಮ’ದಲ್ಲಿ ಭಾಗಿಯಾಗಲು ಉತ್ತರ ಪ್ರದೇಶದ ಜನಪ್ರಿಯ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್ ಜೀ ಯವರು ಉಡುಪಿಗೆ ಆಗಮಿಸಲಿದ್ದಾರೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ. […]
ತ್ರಿವರ್ಣದ ಬೆಳಕಿನಲ್ಲಿ ಮಿನುಗಿದ ಸ್ವಾಮಿ ವಿವೇಕಾನಂದರ ಪ್ರತಿಮೆ
ಕೋಟ: 75ನೆಯ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಉಡುಪಿ ಜಿಲ್ಲೆಯ ಸಾಲಿಗ್ರಾಮದ ಡಿವೈನ್ ಪಾರ್ಕ್ ಟ್ರಸ್ಟ್ ನ ಅಂಗಸಂಸ್ಥೆಯಾದ ಕೋಟ, ಮೂಡುಗಿಳಿಯಾರು ಯೋಗಬನದ ಸರ್ವ ಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನದಲ್ಲಿರುವ ಜಗತ್ತಿನ ಅತಿ ಎತ್ತರದ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ತ್ರಿವರ್ಣ ಸೊಬಗಿನಿಂದ ಅಲಂಕರಿಸಲಾಯಿತು.
ಜ್ಞಾನಸುಧಾ ಕಾಲೇಜಿನಲ್ಲಿ ಮಾಸಿಕ ಮೌಲಿಕ ಸರಣಿ ‘ಮೌಲ್ಯಸುಧಾ’ ಉಪನ್ಯಾಸ ಕಾರ್ಯಕ್ರಮ ಉದ್ಘಾಟನೆ
ಗಣಿತ ನಗರ: ಇಡೀ ವಿಶ್ವವೇ ಭಾರತದ ಕಡೆ ತಿರುಗುವಂತೆ ಮಾಡಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ. ಬದುಕಿದ್ದು ಮೂವತ್ತೊಂಬತ್ತು ವರ್ಷವಾದರೂ, ಅವರು ಮನುಕುಲಕ್ಕೆ ನೀಡಿದ ಸಂದೇಶ ಸಾರ್ವಕಾಲಿಕವಾದುದು ಎಂದು ಶ್ರೀ ಮುನಿರಾಜ ರೆಂಜಾಳ ಹೇಳಿದರು. ಅವರು ಗಣಿತ ನಗರದ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್‌ಎಜ್ಯುಕೇಶನ್‌ಟ್ರಸ್ಟ್ ವತಿಯಿಂದ ಪ್ರಾರಂಭಿಸಲಾದ ಮಾಸಿಕ ಕಾರ್ಯಕ್ರಮ ಸರಣಿ ಮಾಲಿಕೆ ‘ಮೌಲ್ಯ ಸುಧಾ’ವನ್ನು ಉದ್ಘಾಟಿಸಿ, ‘ಸ್ವಾಮಿ ವಿವೇಕಾನಂದರ ಜೀವನಾದರ್ಶಗಳು’ಎಂಬ ವಿಷಯದ ಕುರಿತಂತೆ ವಿಶೇಷ ಉಪನ್ಯಾಸ ನೀಡಿದರು. ರಾಷ್ಟ್ರಪಿತ ಗಾಂಧೀಜಿ ಕೂಡಾ ಸ್ವಾಮಿ […]