ಸುಷ್ಮಾ ಸ್ವರಾಜ್ ನಿಧನಕ್ಕೆ ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಸಂತಾಪ
ಉಡುಪಿ: ತನ್ನ ಸಣ್ಣ ವಯಸ್ಸಿನಿಂದಲೆ ದೇಶ ಭಕ್ತಿಯನ್ನು ಮೈಗೂಡಿಸಿಕೊಂಡು ಬಂದು, ದೇಶ ಸೇವೆಗಾಗಿ ತನ್ನನ್ನು ಮುಡುಪಾಗಿಸಿಕೊಂಡಿದ್ದ, ವಿವಿಧ ಹುದ್ದೆಗಳನ್ನು ಅಲಂಕರಿಸಿ ನಮ್ಮ ಭಾರತ ಸರ್ಕಾರದ ಹೆಚ್ಚು ಜವಾಬ್ಧಾರಿಯುಳ್ಳ ಹಾಗೂ ಶ್ರೇಷ್ಠ ಸ್ಥಾನವಾದ ವಿದೇಶಾಂಗ ಸಚಿವೆಯಾಗಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದ ಸರಳ ಸಜ್ಜನಿಕೆಯ ನಮ್ಮ ದೇಶದ ಧೀಮಂತ ನಾಯಕಿ ಸುಷ್ಮಾ ಸ್ವರಾಜ್ ನಿಧನರಾಗಿರುವುದು ದುಃಖ ತಂದಿದೆ ಎಂದು ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಸಂತಾಪ ವ್ಯಕ್ತಪಡಿಸಿದ್ದಾರೆ.