ಪುತ್ತಿಗೆ ಮಠ ಕಿರಿಯ ಶ್ರೀಗಳಿಂದ ಶ್ರೀ ಕೃಷ್ಣನಿಗೆ ವಿದ್ಯುಕ್ತ ಪೂಜೆ

ಉಡುಪಿ: ಪರ್ಯಾಯ ಪುತ್ತಿಗೆ ಮಠದ ಕಿರಿಯ ಯತಿಗಳಾದ ಸುಶ್ರೀಂದ್ರತೀರ್ಥರು ಶ್ರೀಕೃಷ್ಣ ಮೂರ್ತಿಯನ್ನು ಸ್ಪರ್ಶಿಸಿ ಪೂಜೆ ನಡೆಸಿದ್ದಾರೆ. ಕೆಲವು ದಿನಗಳ ಹಿಂದೆ ಪುತ್ತಿಗೆ ಮಠದ ಹಿರಿಯ ಶ್ರೀಗಳು ಕಿರಿಯ ಶ್ರೀಗಳಿಗೆ ಶ್ರೀಕೃಷ್ಣನ ಮೂರ್ತಿಯನ್ನು ಮುಟ್ಟಿಸಿ, ಪೂಜಾಧಿಕಾರ ನೀಡಿದ್ದರು ಎನ್ನಲಾಗಿದ್ದು, ಭಾನುವಾರ ಕಿರಿಯ ಯತಿಗಳೇ ಪೂಜೆ ನಡೆಸಿದ್ದಾರೆ. ಆ ಮೂಲಕ ಕಳೆದ ಕೆಲವು ದಿನಗಳಿಂದ ಇದ್ದ ಕೃಷ್ಣ ಪೂಜಾಧಿಕಾರದ ಬಗೆಗಿನ ಸಂದೇಹಗಳಿಗೆ ತೆರೆ ಎಳೆದಿದ್ದಾರೆ.