ಹಿರಿಯಡಕ: ಅವಿವಾಹಿತ ಯುವಕ ನೇಣಿಗೆ ಶರಣು

ಹಿರಿಯಡಕ: ಆರ್ಥಿಕ ಸಂಕಷ್ಟದಿಂದ ಖಿನ್ನತೆಗೆ ಒಳಗಾಗಿದ್ದ ಯುವಕನೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿರಿಯಡಕ ಕೊಂಡಾಡಿ ಭಜನೆ ಕಟ್ಟೆ ಎಂಬಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಕೊಂಡಾಡಿ ಭಜನೆಕಟ್ಟೆ ನಿವಾಸಿ ಶ್ರೀನಿವಾಸ ಆಚಾರ್ಯರ ಮಗ ದೇವೇಂದ್ರ ಆಚಾರ್ಯ( ಮುನ್ನ) ನೇಣಿಗೆ ಶರಣಾದ ವ್ಯಕ್ತಿ. ಇವರು ಮರದ ಕೆಲಸ ಮಾಡಿಕೊಂಡಿದ್ದು, ಕೋವಿಡ್ ಲಾಕ್ ಡೌನ್ ಬಳಿಕ ಸರಿಯಾಗಿ ಕೆಲಸ ಇರಲಿಲ್ಲ. ಈ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಹಿರಿಯಡಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.