ರೈಲು ಅಪಘಾತದಲ್ಲಿ ಎರಡು ಕಾಲು,ಬಲಗೈ ಹಾಗೂ ಎಡಗೈ ಬೆರಳು ಕಳೆದುಕೊಂಡರೂ ಯು.ಪಿ.ಎಸ್.ಸಿ ಪಾಸ್ ಮಾಡಿದ ಛಲದಂಕಮಲ್ಲ ಸೂರಜ್ ತಿವಾರಿ

ಲಕ್ನೋ: ಕೇಂದ್ರ ಲೋಕಸೇವಾ ಆಯೋಗ (UPSC) 2022 ರಲ್ಲಿ ನಡೆದ ಪರೀಕ್ಷೆಯ ಅಂತಿಮ ಫಲಿತಾಂಶವನ್ನು ಮಂಗಳವಾರ ಪ್ರಕಟಿಸಿದೆ. ಉತ್ತರ ಪ್ರದೇಶದ ಸೂರಜ್ ತಿವಾರಿ ಯಶಸ್ವಿಯಾಗಿ ತೇರ್ಗಡೆಯಾದ ಅಭ್ಯರ್ಥಿಗಳಲ್ಲಿ ಸೇರಿದ್ದಾರೆ. ಮೈನ್‌ಪುರಿಯ ಸೂರಜ್ ತಿವಾರಿ 2017 ರಲ್ಲಿ ಗಾಜಿಯಾಬಾದ್‌ನ ದಾದ್ರಿಯಲ್ಲಿ ನಡೆದ ರೈಲು ಅಪಘಾತದಲ್ಲಿ ತನ್ನ ಎರಡೂ ಕಾಲುಗಳು ಹಾಗೂ ಬಲಗೈ ಮತ್ತು ಎಡಗೈಯ ಎರಡು ಬೆರಳುಗಳನ್ನು ಕಳೆದುಕೊಂಡಿದ್ದಾರೆ. ಆದರೂ ಎದೆಗುಂದದ ಅವರು ಯು.ಪಿ.ಎಸ್.ಸಿ ಪರೀಕ್ಷೆ ಬರೆದು ತೇರ್ಗಡೆ ಹೊಂದಿ ಇತರರಿಗೆ ಮಾದರಿಯಾಗಿದ್ದಾರೆ. ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ ಸೂರಜ್ […]