ದುಬೈನ ಸುಪರ್ ಜಂಬೋ ವಿಮಾನವನ್ನು ಬೆಂಗಳೂರಿನಲ್ಲಿ ಇಳಿಸಿದ ಉಡುಪಿ ಮೂಲದ ಪೈಲಟ್ ಸಂದೀಪ್ ಪ್ರಭು
ಉಡುಪಿ: ವಿಶ್ವದ ಅತಿದೊಡ್ಡ ವಿಮಾನ ಎ380 ಅನ್ನು ಯಶಸ್ವಿಯಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸಿದ ಸಂದೀಪ್ ಪ್ರಭು ಉಡುಪಿ ಜಿಲ್ಲೆಯವರು. ಉಡುಪಿಯ ಅಲೆವೂರು ಮೂಲದ ಶ್ರೀಮತಿ ಆರತಿ ಪ್ರಭು ಮತ್ತು ಶಿವರಾಯ ಪ್ರಭು ದಂಪತಿಗಳಿಗೆ ಜನಿಸಿದ ಸಂದೀಪ್ ಅವರು ಸುಮಾರು 15 ವರ್ಷಗಳಿಂದ ಪೈಲಟ್ ಆಗಿದ್ದಾರೆ. ಏರ್‌ಬಸ್ ಎ380 ಒಂದು ಬೃಹತ್ ಗಾತ್ರದ ವಿಮಾನವಾಗಿದ್ದು,ಇದನ್ನು ಏರ್‌ಬಸ್ ಅಭಿವೃದ್ಧಿಪಡಿಸಿ ಉತ್ಪಾದಿಸಿದೆ. ಇದು ವಿಶ್ವದ ಅತಿ ದೊಡ್ಡ ಪ್ರಯಾಣಿಕ ವಿಮಾನವಾಗಿದೆ ಮತ್ತು ಅತ್ಯಂತ ಉದ್ದದ ಡಬಲ್ ಡೆಕ್ ಜೆಟ್ […]