ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿದ ಚಿತ್ರನಟ ಸುನಿಲ್ ಶೆಟ್ಟಿ

ಪಡುಬಿದ್ರೆ: ಮಂಗಳವಾರದಂದು ಹಿಂದಿ ಚಿತ್ರನಟ ಸುನಿಲ್ ಶೆಟ್ಟಿ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದರು. ಜನರ ಜೊತೆ ಬೆರೆದ ಅವರು ಮಾತೃ ಭಾಷೆ ತುಳುವಿನಲ್ಲಿ ನಿರರ್ಗಳವಾಗಿ ಮಾತಾಡಿದ್ದು, ತುಳುನಾಡಿನ ಸಂಪ್ರದಾಯಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡದ್ದು ಜನರ ಮೆಚ್ಚುಗೆಗೆ ಪಾತ್ರವಾಯಿತು.