ಕಾರ್ಕಳ-ಬಂಟ್ವಾಳದಲ್ಲಿ ಉ.ಪ್ರ. ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ಬೃಹತ್ ರೋಡ್ ಶೋ : ಹರಿದು ಬಂದ ಜನಸಾಗರ
ಕಾರ್ಕಳ : ಕರಾವಳಿಯ ಜಿಲ್ಲೆಗಳಾದ ಕಾರ್ಕಳ ಮತ್ತು ಬಂಟ್ವಾಳದಲ್ಲಿ ಉ.ಪ್ರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬೃಹತ್ ರೋಡ್ ನಡೆಸಿದರು. ಸುಮಾರು 15 ಸಾವಿರಕ್ಕೂ ಅಧಿಕ ಮಂದಿ ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಅವರನ್ನು ಸ್ವಾಗತಿಸಿ, ರೋಡ್ ಶೋದಲ್ಲಿ ಪಾಲ್ಗೊಂಡರು. ಬಜರಂಗದಳದ ಸುದ್ದಿಗೇನಾದರೂ ಕಾಂಗ್ರೆಸ್ ಕೈ ಹಾಕಿದಲ್ಲಿ ಸಹಿಸುವ ಮಾತೇ ಇಲ್ಲ. ಬಜರಂಗದಳ ನಿಶೇಧ ಕುರಿತು ಕಾಂಗ್ರೆಸ್ ಯೋಚಿಸಿದ್ದು, ಅಂಥದ್ದೇನಾದರೂ ನಡೆಯದಂತೆ ಬಿಜೆಪಿಯನ್ನೇ ಜನರು ಆಯ್ಕೆ ಮಾಡಬೇಕು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು. भगवान श्री हनुमान […]
ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿ ಜನರ ಮನ್ನಣೆಗೆ ಪಾತ್ರವಾಗಿದೆ: ಸುನಿಲ್ ಕುಮಾರ್
ಕಾರ್ಕಳ: ಸ್ವಚ್ಛ ಕಾರ್ಕಳದ ಪರಿಕಲ್ಪನೆ, 237 ಕಿಂಡಿ ಅಣೆಕಟ್ಟುಗಳ ಮೂಲಕ ಕೃಷಿಗೆ ಉತ್ತೇಜನ್, ಕೆಜೆ, ಟಿಟಿಐ ನರ್ಸಿಂಗ್ ಕಾಲೇಜುಗಳ ಮೂಲಕ ಶಿಕ್ಷಣಕ್ಕೆ ಒತ್ತು, ಪ್ರವಾಸೋದ್ಯಮಕ್ಕೆ ಉತ್ತೇಜನ, ಕರೋನಾ ಸಂಕಷ್ಟ ಕಾಲದಲ್ಲೂ ಸವಾಲುಗಳನ್ನು ಎದುರಿಸಿರುವುದು, ತಾಲೂಕಿನ ಸಂಪೂರ್ಣ ಅಭಿವೃದ್ದಿಯು ತನಗೆ ಶ್ರೀರಕ್ಷೆಯಾಗಿದೆ ಎಂದು ಕಾರ್ಕಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಹೇಳಿದರು. ಕಾರ್ಕಳದ ಜನತೆ ಬಿಜೆಪಿ ಆಡಳಿತವನ್ನು ಮೆಚ್ಚಿ ಬೆಂಬಲಿಸಿದ್ದಾರೆ. ಇಂದು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುತ್ತಿರುವವರೂ ಬಿಜೆಪಿಯಿಂದ ಫಲಾನುಭವಿಯಾಗಿದ್ದವರು ಎಂದು ಅವರು ಹೇಳಿದರು. ಗ್ರಾಮಾಭಿವೃದ್ದಿಯಿಂದ ರಾಜ್ಯದ ಅಭಿವೃದ್ದಿ […]
ಮುಂದಿನ ಬಾರಿ ಚುನಾಯಿತನಾದರೆ ರಾಮಸಮುದ್ರ ಪ್ರವಾಸಿತಾಣವಾಗಿ ನಿರ್ಮಾಣ: ವಿ.ಸುನಿಲ್ ಕುಮಾರ್
ಕಾರ್ಕಳ: ಪರಶುರಾಮ ಥೀಂ ಪಾರ್ಕ್ ನಲ್ಲಿ ಭಜನಾ ಮಂದಿರ ನಿರ್ಮಾಣವಾಗುವ ಮೂಲಕ ಆಧ್ಯಾತ್ಮಿಕ ಮತ್ತು ಧಾರ್ಮಿಕ ಭಾವನೆ ಉಂಟಾಗಿದೆ. ಜನರಿಂದ ಆಯ್ಕೆಯಾದ ಬಳಿಕ ಮೂಲಸೌಕರ್ಯಕ್ಕೆ ಸೀಮಿತವಾಗಿ ಕೆಲಸ ಮಾಡಿಲ್ಲ. ಪ್ರವಾಸೋದ್ಯಮವೂ ಸೇರಿದಂತೆ ಎಲ್ಲ ಆಯಾಮಗಳಲ್ಲಿ ಪ್ರಗತಿ ಸಾಧಿಸಲು ಪ್ರಯತ್ನಿಸಿದ್ದು, ಮುಂದಿನ ಬಾರಿ ಚುನಾಯಿತಗೊಂಡರೆ ಮುಂದಿನ ಎರಡು ವರ್ಷಗಳೊಳಗೆ ಕಾರ್ಕಳದ ಐತಿಹಾಸಿಕ ರಾಮಸಮುದ್ರವನ್ನು ರಾಜ್ಯದ ಪ್ರಮುಖ ಪ್ರವಾಸಿ ತಾಣವಾಗಿ ಮಾಡುತ್ತೇನೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು ಎಂದು ಸಚಿವ ವಿ.ಸುನಿಲ್ ಕುಮಾರ್ ಹೇಳಿದರು. ಅವರು ಶನಿವಾರದಂದು ಕಾರ್ಕಳದ ಪರಶುರಾಮ […]
ಜ.8 ರಂದು ರಾಜ್ಯಮಟ್ಟದ ಕಂಬಳ ಕ್ರೀಡೋತ್ಸವಕ್ಕೆ ಚಾಲನೆ: ಸುನಿಲ್ ಕುಮಾರ್
ಜ.8 ರಂದು ಕಾರ್ಕಳದ ಮಿಯಾರಿನಲ್ಲಿ 19 ನೇ ವರ್ಷದ ಲವಕುಶ ಜೋಡುಕರೆ ಕಂಬಳ ನಡೆಯಲಿದ್ದು, ಅಂದು ನೂತನ ಸಭಾ ವೇದಿಕೆಯ ಉದ್ಘಾಟನೆ ಹಾಗೂ ರಾಜ್ಯಮಟ್ಟದ ಕಂಬಳ ಕ್ರೀಡೋತ್ಸವಕ್ಕೆ ಚಾಲನೆ ನೀಡಲಾಗುವುದು ಎಂದು ಮಿಯಾರು ಕಂಬಳ ಸಮಿತಿ ಅಧ್ಯಕ್ಷ ಹಾಗೂ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ. ಕರಾವಳಿ ಅಭಿವೃದ್ದಿ ಪ್ರಾಧಿಕಾರದಿಂದ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ಸಭಾವೇದಿಕೆಯು ನಿರ್ಮಾಣವಾಗಿದ್ದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಇದರ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಅಲ್ಲದೆ ರಾಜ್ಯ ಸರ್ಕಾರದ ಸಚಿವರು ಮತ್ತು ಕೇಂದ್ರ […]
ಡಿ.25 ರಂದು ಉಡುಪಿಗೆ ಬರಲಿದ್ದಾರೆ ಉತ್ತರಪ್ರದೇಶದ ಸಂತ: ಯುವ ಮತದಾರರ ಸಮಾವೇಶದಲ್ಲಿ ಯೋಗಿ ಆದಿತ್ಯನಾಥ್ ಭಾಗಿ
ಉಡುಪಿ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇದೇ ಪ್ರಥಮ ಬಾರಿಗೆ ಕರಾವಳಿ ಕರ್ನಾಟಕ್ಕೆ ಕಾಲಿಡುತ್ತಿದ್ದಾರೆ. ಹಿಂದುತ್ವದ ಭದ್ರ ಕೋಟೆಯಲ್ಲಿ ಹಿಂದೂ ಸಂತನ ಆಗಮನವನ್ನು ಸ್ವಾಗತಿಸಲು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಉತ್ಸಾಹದಿಂದ ಸಜ್ಜಾಗುತ್ತಿದ್ದಾರೆ. ಇಂಧನ ಸಚಿವ ಸುನಿಲ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದು, ಡಿ.25 ರಂದು ಜಿಲ್ಲೆಯಲ್ಲಿ ನಡೆಯಲಿರುವ ಯುವ ಮತದಾರರ ಸಮಾವೇಶದಲ್ಲಿ ಉ.ಪ್ರ. ಜನಪ್ರಿಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗವಹಿಸಲಿದ್ದಾರೆ ಎಂದಿದ್ದಾರೆ. ಡಿ.6 ರಂದು ನಡೆದ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು ೨೦೨೩ ವಿಧಾನಸಭಾ […]