ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿ ಜನರ ಮನ್ನಣೆಗೆ ಪಾತ್ರವಾಗಿದೆ: ಸುನಿಲ್ ಕುಮಾರ್

ಕಾರ್ಕಳ: ಸ್ವಚ್ಛ ಕಾರ್ಕಳದ ಪರಿಕಲ್ಪನೆ, 237 ಕಿಂಡಿ ಅಣೆಕಟ್ಟುಗಳ ಮೂಲಕ ಕೃಷಿಗೆ ಉತ್ತೇಜನ್, ಕೆಜೆ, ಟಿಟಿಐ ನರ್ಸಿಂಗ್ ಕಾಲೇಜುಗಳ ಮೂಲಕ ಶಿಕ್ಷಣಕ್ಕೆ ಒತ್ತು, ಪ್ರವಾಸೋದ್ಯಮಕ್ಕೆ ಉತ್ತೇಜನ, ಕರೋನಾ ಸಂಕಷ್ಟ ಕಾಲದಲ್ಲೂ ಸವಾಲುಗಳನ್ನು ಎದುರಿಸಿರುವುದು, ತಾಲೂಕಿನ ಸಂಪೂರ್ಣ ಅಭಿವೃದ್ದಿಯು ತನಗೆ ಶ್ರೀರಕ್ಷೆಯಾಗಿದೆ ಎಂದು ಕಾರ್ಕಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಹೇಳಿದರು.

ಕಾರ್ಕಳದ ಜನತೆ ಬಿಜೆಪಿ ಆಡಳಿತವನ್ನು ಮೆಚ್ಚಿ ಬೆಂಬಲಿಸಿದ್ದಾರೆ. ಇಂದು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುತ್ತಿರುವವರೂ ಬಿಜೆಪಿಯಿಂದ ಫಲಾನುಭವಿಯಾಗಿದ್ದವರು ಎಂದು ಅವರು ಹೇಳಿದರು.

ಗ್ರಾಮಾಭಿವೃದ್ದಿಯಿಂದ ರಾಜ್ಯದ ಅಭಿವೃದ್ದಿ

ಹಿಂದಿನ ಚುನಾವಣೆಯಲ್ಲಿ ಭಾರತೀಯ ಪಕ್ಷವನ್ನು ಬೆಂಬಲಿಸಿದ್ದರಿಂದ ಕ್ಷೇತ್ರದ ಗ್ರಾಮಗಳ ಅಭಿವೃದ್ದಿಯಾಗಿದೆ. ಪಕ್ಷದ ಧ್ಯೇಯ ಸರ್ವಾಂಗೀಣ ಅಭಿವೃದ್ದಿಯಾಗಿದ್ದು ಎಲ್ಲಾ ಕ್ಷೇತ್ರಗಳಿಗೂ ಮಹತ್ವ ನೀಡಲಾಗಿದೆ ಎಂದರು.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಸುನಿಲ್ ಕುಮಾರ್ ಗೆದ್ದು ದಾಖಲೆ ಬರೆಯಲಿದ್ದಾರೆ. ಎರಡು ಇಲಾಖೆಗಳನ್ನು ನಿಭಾಯಿಸಿ ಒತ್ತಡದ ಮಧ್ಯೆಯೂ ಜನಮನ್ನಣೆ ಗಳಿಸಿದ್ದಾರೆ ಎಂದರು.

ಬಿಜೆಪಿ ಹಿರಿಯ ಮುಖಂಡ ಎಂ‌ಕೆ ವಿಜಯಕುಮಾರ್ , ಕಾಪು ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ,ಉಡುಪಿ ಶಾಸಕ ರಘುಪತಿ ಭಟ್ ಮಾತನಾಡಿದರು ಸಭೆಯಲ್ಲಿ ಮುಂಬಯಿ ಉದ್ಯಮಿ ರತ್ನಾಕರ್ ಶೆಟ್ಟಿ , ಕರುಣಾಕರ್ ಶೆಟ್ಟಿ , ಶಶಿಕಿರಣ್ ಶೆಟ್ಟಿ ಬರೋಡ , ಎರ್ಮಾಳು ಹರೀಶ್ ಶೆಟ್ಟಿ, ಪುರಂದರ , ಪೂನಾ ವಿಶ್ವನಾಥ ಪೂಜಾರಿ , ಪ್ರಸಾದ್‌ ಶೆಟ್ಟಿ , ಬಾಲಕೃಷ್ಣ ಶೆಟ್ಟಿ , ಬೆಳ್ವಾಯಿ ಸದಾನಂದ ಶೆಟ್ಟಿ , ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಿಜೆಪಿ ಹಿರಿಯ ಮುಖಂಡರಾದ ಎಂಕೆ ವಿಜಯಕುಮಾರ್ , ಬೋಳ ಪ್ರಭಾಕರ್ ಕಾಮತ್ , ಉಡುಪಿ ಬಿಜೆಪಿ ಅಭ್ಯರ್ಥಿ ಯಶ್ಪಾಲ್ ಸುವರ್ಣ, , ಕ್ಯಾಪ್ಟನ್ ಗಣೇಶ್ ಕಾರ್ಣಿಕ್ , ಕಾರ್ಕಳ ಚುನಾವಣಾ ಪ್ರಭಾರಿ ಬಾಹುಬಲಿ ಪ್ರಸಾದ್ , ಭಾಸ್ಕರ್ ಕೋಟ್ಯಾನ್, ಜಿಲ್ಲಾದ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಗೇರು ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ , ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಮಹೇಶ್ ಕುಡುಪುಲಾಜೆ , ರವೀಂದ್ರ ಶೆಟ್ಟಿ ಬಜಗೋಳಿ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಉಪಸ್ಥಿತರಿದ್ದರು.

ಕುಕ್ಕುಂದೂರು ರವೀಂದ್ರ ಶೆಟ್ಟಿ ಸ್ವಾಗತಿಸಿದರು. ಸಾಣೂರು ನರಸಿಂಹ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ಸಾಣೂರು ಕರಣಾಕರ್ ಕೋಟ್ಯಾನ್ ವಂದಿಸಿದರು.

ಕಾರ್ಕಳ ಸ್ವರಾಜ್ಯ ಮೈದಾನದಿಂದ ಹೊರಟ ಪಾದಯಾತ್ರೆ ಅನಂತಶಯನ ಮಾರ್ಗವಾಗಿ ಬಸ್ ನಿಲ್ದಾಣ , ಮೂರುಮಾರ್ಗ , ಸಾಲ್ಮರ , ಬಂಡಿಮಠ, ಮೂಲಕ ಕಾರ್ಕಳ ತಾಲೂಕು ಸೌಧ ಬಳಿಯಿಂದ ಸಾಗಿ ಕುಕ್ಕೂಂದೂರು ಪಂಚಾಯತ್ ಮೈದಾನಕ್ಕೆ ತೆರಳಿತು.