ಪಿಡಿಒಯಿಂದ ರಾಷ್ಟ್ರಪತಿಯವರೆಗೂ ಆರ್‌ಎಸ್‌ಎಸ್‌ನವರು ಇದ್ದಾರೆ: ಎಚ್ ಡಿಕೆಗೆ ತಿರುಗೇಟು ಕೊಟ್ಟ ಸಚಿವ ಸುನಿಲ್ ಕುಮಾರ್
ಉಡುಪಿ: ಆರ್ ಎಸ್ಎಸ್ ಕುರಿತು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ಇಂಧನ ಸಚಿವ ವಿ.ಸುನಿಲ್ ಕುಮಾರ್ ಉಡುಪಿಯಲ್ಲಿ ಪ್ರತಿಕ್ರಿಯಿಸಿದರು. ಐಎಎಸ್, ಐಪಿಎಸ್ ಅಧಿಕಾರಿಗಳು ಮಾತ್ರವಲ್ಲ, ಪಿಡಿಒಗಳಿಂದ ಹಿಡಿದು ರಾಷ್ಟ್ರಪತಿಯವರೆಗೂ ಆರ್‌ಎಸ್‌ಎಸ್‌ನವರು ಇದ್ದಾರೆ ಎನ್ನುವ ಮೂಲಕ ಸಚಿವ ಸುನಿಲ್ ಕುಮಾರ್, ಕುಮಾರಸ್ವಾಮಿಗೆ ತಿರುಗೇಟು ನೀಡಿದರು. ಮಣಿಪಾಲದ ಸಿದ್ಧಿ ವಿನಾಯಕ ದೇವಾಸ್ಥಾನದ ಬಳಿಯ ಸ್ವರ್ಣಾ ನದಿಗೆ ಇಂದು ಬಾಗಿನ ಅರ್ಪಿಸಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಆರ್‌ಎಸ್‌ಎಸ್ ಹಿನ್ನೆಲೆಯ ನಾಲ್ಕು ಸಾವಿರ ಐಎಎಸ್, ಐಪಿಎಸ್ ಅಧಿಕಾರಿಗಳು ಇದ್ದಾರೆ ಎಂದು […]