ಮುದ್ದಾಗಿ ನಗುತಿಹನಮ್ಮ ನಮ್ಮ ಸೂರ್ಯ! ನಗುತ್ತಿರುವ ಸೂರ್ಯನ ಚಿತ್ರವನ್ನು ಹಂಚಿಕೊಂಡ ನಾಸಾ

ನ್ಯೂಯಾರ್ಕ್: ಈ ವಾರ ಸೂರ್ಯನ ಹೊಸ ಉಪಗ್ರಹ ಚಿತ್ರವನ್ನು ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಬಿಡುಗಡೆ ಮಾಡಿದೆ. ಈ ಚಿತ್ರದಲ್ಲಿ ನಮ್ಮ ಸೂರ್ಯನು ನಗುತ್ತಿರುವಂತೆ ಭಾಸವಾಗುತ್ತಿದೆ! ನಾಸಾದ ಸೋಲಾರ್ ಡೈನಾಮಿಕ್ಸ್ ಅಬ್ಸರ್ವೇಟರಿಯಿಂದ ಫೋಟೋವನ್ನು ಸೆರೆಹಿಡಿಯಲಾಗಿದೆ. ಅಬ್ಸರ್ವೇಟರಿಯು ಸೂರ್ಯನ ವಿಕಿರಣದ ಉತ್ಪಾದನೆಯಲ್ಲಿನ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಲು ಕೆಲಸ ಮಾಡುತ್ತದೆ. “ನೇರಳಾತೀತ ಬೆಳಕಿನಲ್ಲಿ ನೋಡಿದರೆ, ಸೂರ್ಯನ ಮೇಲಿನ ಕಾಣುವ ಈ ಕಪ್ಪು ಪ್ರದೇಶಗಳನ್ನು ಕರೋನಲ್ ರಂಧ್ರಗಳು ಎಂದು ಕರೆಯಲಾಗುತ್ತದೆ ಮತ್ತು ಅವು ವೇಗದ ಸೌರ ಮಾರುತವು ಬಾಹ್ಯಾಕಾಶಕ್ಕೆ ಚಿಮ್ಮುವ ಪ್ರದೇಶಗಳಾಗಿವೆ” ಎಂದು […]