ಸುಳ್ಯ: ಅಕ್ರಮ ಗಂಧ ಸಾಗಾಟ; ಮೂವರ ಬಂಧನ

ಮಂಗಳೂರು: ಕಾರಿನಲ್ಲಿ ಅಕ್ರಮವಾಗಿ ಗಂಧದ ಕೊರಡು, ಚಕ್ಕೆಗಳನ್ನು ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಜಾಲ್ಸೂರಿನಲ್ಲಿ ನಡೆದಿದೆ. ಕೊಡಗು ಜಿಲ್ಲೆಯ ಸೋಮವಾರಪೇಟೆಯ ಅಶ್ರಫ್, ಉನೈಸ್, ಕೃಷ್ಣ ಕುಟ್ಟಿ ಬಂಧಿತ ಆರೋಪಿಗಳು. ಮಡಿಕೇರಿಯಿಂದ ಪುತ್ತೂರಿಗೆ ಮಾರುತಿ ಆಲ್ಟೋ ಕಾರಿನಲ್ಲಿ ಆರೋಪಿಗಳು ಯಾವುದೇ ಪರವಾನಿಗೆ ಇಲ್ಲದೆ ಎರಡು ಗೋಣಿ ಚೀಲಗಳಲ್ಲಿ ಸುಮಾರು 31.424 ಕೆಜಿ ಗಳಷ್ಟು ತೂಕದ 40 ಗಂಧದ ಹಸಿ ಕೊರಡುಗಳನ್ನು ಮತ್ತು 3 ಚಕ್ಕೆಗಳನ್ನು ತುಂಬಿಸಿ ಸಾಗಾಟ ಮಾಡುತ್ತಿದ್ದರು. […]