ಸುಖೋಯ್ ಯುದ್ದವಿಮಾನದಲ್ಲಿ ಹಾರಾಟ ನಡೆಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ತಮ್ಮ ಚೊಚ್ಚಲ ಫೈಟರ್ ಜೆಟ್ ಹಾರಾಟ ನಡೆಸಿದರು. ಅಸ್ಸಾಂನ ಆಯಕಟ್ಟಿನ ವಾಯುನೆಲೆಯಾದ ತೇಜ್‌ಪುರ್ ಏರ್‌ಫೋರ್ಸ್ ಸ್ಟೇಷನ್‌ನಲ್ಲಿ ಸುಖೋಯ್ 30 MKI ಯುದ್ಧ ವಿಮಾನದಲ್ಲಿ ದ್ರೌಪದಿ ಮುರ್ಮು ಹಾರಾಟ ನಡೆಸಿದ್ದಾರೆ. ಭಾರತೀಯ ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್ ಆಗಿರುವ ರಾಷ್ಟ್ರಪತಿಗಳು, ಬ್ರಹ್ಮಪುತ್ರ ಮತ್ತು ತೇಜ್‌ಪುರ ಕಣಿವೆಯ ಮೇಲೆ ಸುಮಾರು 30 ನಿಮಿಷಗಳ ಕಾಲ ಹಾರಾಟ ನಡೆಸಿ ವಾಯುಪಡೆಯ ನಿಲ್ದಾಣಕ್ಕೆ ಮರಳಿದರು. ಹಾರಾಟದ ಬಗ್ಗೆ ಪ್ರತಿಕ್ರಿಯಿಸಿದ ಮುರ್ಮು, “ಅಚ್ಛಾ ಲಗಾ” ಎಂದಿದ್ದಾರೆ. […]